ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಕೊಲಂಬಸ್‌ನಲ್ಲಿ ನದಿಯ ಮೇಲಿನ ರೈಲ್ವೆ ಸೇತುವೆ ಕುಸಿದ ಪರಿಣಾಮ ಗೂಡ್ಸ್ ರೈಲು ನದಿಗೆ ಉರುಳಿದೆ. ನದಿಗೆ ಬಿದ್ದ ಗೂಡ್ಸ್ ರೈಲಿನಲ್ಲಿ ಬಿಸಿ ಡಾಂಬರು ಮತ್ತು ಗಂಧಕದಂತಹ ಅಪಾಯಕಾರಿ ಪದಾರ್ಥಗಳಿದ್ದವು ಎಂದು ತಿಳಿದುಬಂದಿದೆ.
ಮೊಂಟಾನಾ ರೈಲ್ ಲಿಂಕ್ ವಕ್ತಾರ ಆಂಡಿ ಗಾರ್ಲ್ಯಾಂಡ್ ಹೇಳಿಕೆಯಲ್ಲಿ ಬಿಸಿ ಡಾಂಬರು, ಕರಗಿದ ಗಂಧಕವನ್ನು ಹೊತ್ತ ರೈಲು ನದಿಗೆ ಬಿದ್ದುದರಿಂದಾಗಿ ನದಿ ನೀರಿನ ಬಳಕೆಯನ್ನು ನಿಷೇಧಿಸಲಾಗಿದೆ. ರೈಲು ಸಿಬ್ಬಂದಿ ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೇತುವೆ ಕುಸಿತದಿಂದಾಗಿ ರಾಜ್ಯದ ಅನೇಕ ಬಳಕೆದಾರರಿಗೆ ಇಂಟರ್ನೆಟ್ ಸೇವೆಗಳನ್ನು ಒದಗಿಸುವ ಫೈಬರ್ ಆಪ್ಟಿಕ್ ಕೇಬಲ್ ಅನ್ನು ಸಹ ತೆಗೆದುಹಾಕಲಾಗಿದೆ ಎಂದು ಹೈಸ್ಪೀಡ್ ಪ್ರೊವೈಡರ್ ಗ್ಲೋಬಲ್ ನೆಟ್ ಹೇಳಿದೆ. ನದಿಯ ಮೇಲಿನ ರೈಲ್ವೆ ಸೇತುವೆ ಕುಸಿದಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಕಲುಷಿತಗೊಂಡ ನದಿ ನೀರು ಹೊಲಗಳಿಗೆ ಹೋಗದಂತೆ ಕಾಲುವೆಯಲ್ಲೇ ನಿಲ್ಲಿಸಲಾಗಿದೆ.