ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈಜಯಂತಿ ಮೂವೀಸ್ ಬ್ಯಾನರ್ನಲ್ಲಿ ಸುಮಾರು 500 ಕೋಟಿ ಬಜೆಟ್ನಲ್ಲಿ ನಾಗ್ ಅಶ್ವಿನ್ ನಿರ್ದೇಶನದ ʻಪ್ರಾಜೆಕ್ಟ್ ಕೆʼ ಪ್ರಸ್ತುತ ಚಿತ್ರದ ಶೂಟಿಂಗ್ ಹಂತದಲ್ಲಿದೆ. ಪ್ರಭಾಸ್ ನಾಯಕ ನಟನಾಗಿರುವ ಈ ಸಿನಿಮಾದಲ್ಲಿ ಬಾಲಿವುಡ್ ತಾರೆಯರಾದ ದೀಪಿಕಾ ಪಡುಕೋಣೆ, ಅಮಿತಾಬ್, ದಿಶಾ ಪಠಾನಿ ಸೇರಿದಂತೆ ಹಲವು ಸ್ಟಾರ್ ನಟರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಪ್ರಾಜೆಕ್ಟ್ ಕೆ ಚಿತ್ರದ ಇತ್ತೀಚಿನ ಅಪ್ಡೇಟ್ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಕಮಲ್ ಹಾಸನ್ ಪ್ರಾಜೆಕ್ಟ್ ಕೆ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಪ್ರಾಜೆಕ್ಟ್ ಕೆ ನಲ್ಲಿ ಕಮಲ್ ಪಾತ್ರದ ಗ್ಲಿಂಪ್ಸ್ಅನ್ನು ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕಮಲ್ ವಿಲನ್ ಪಾತ್ರ ಮಾಡಲಿದ್ದಾರೆ ಎಂದು ವರದಿಯಾಗಿದೆ. ಇದರೊಂದಿಗೆ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.
ಪ್ರಾಜೆಕ್ಟ್ ಕೆ ಚಿತ್ರದಲ್ಲಿ ಕಮಲ್ ನಟಿಸುತ್ತಿರುವ ಬಗ್ಗೆ ಪ್ರಭಾಸ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಚಿತ್ರತಂಡ ಬಿಡುಗಡೆ ಮಾಡಿರುವ ವೀಡಿಯೋವನ್ನು ಶೇರ್ ಮಾಡುತ್ತಾ.. ನನ್ನ ಹೃದಯದಲ್ಲಿ ಸದಾ ಉಳಿಯುವ ನೆನಪು, ಕಮಲ್ ಸರ್ ಜೊತೆ ನಟಿಸುತ್ತಿರುವುದು ಗೌರವಕ್ಕಿಂತ ಮಿಗಿಲು. ಅವರಿಂದ ನಟನೆ ಕಲಿಯುವುದೇ ದೊಡ್ಡ ಭಾಗ್ಯ, ನನ್ನ ಕನಸು ನನಸಾಗಲಿದೆ ಎಂದು ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಪ್ರಭಾಸ್ ಪೋಸ್ಟ್ ಕೂಡ ವೈರಲ್ ಆಗಿದೆ. ಈ ಚಿತ್ರವು 12 ಜನವರಿ 2024 ರಂದು ಸಂಕ್ರಾಂತಿ ಉಡುಗೊರೆಯಾಗಿ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ.