ಜಾನುವಾರು ರಕ್ಷಿಸಿದವರ ಮೇಲೆ ಹಲ್ಲೆ: ಕಠಿಣ ಕಾನೂನು ಕ್ರಮಕ್ಕೆ ವಿಹಿಂಪ ಪಟ್ಟು

ಹೊಸದಿಗಂತ ವರದಿ ಹುಬ್ಬಳ್ಳಿ:

ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರಗಳನ್ನು ರಕ್ಷಸಿದವರ ಮೇಲೆ ಕೆಲವರು ಪೊಲೀಸ್ ಠಾಣೆಯ ಮುಂದೆಯೇ ಹಲ್ಲೆ ಮಾಡಲು ಯತ್ನಿಸಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪೊಲೀಸರಿಗೆ ಆಗ್ರಹಿಸಿದರು.

ಭಾನುವಾರ ವಿದ್ಯಾನಗರ ಪೊಲೀಸ್ ಠಾಣೆಯ ಆವರಣದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಪೊಲೀಸ್ ಠಾಣೆಯ ಮುಂದೆ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಕ್ರಮವಾಗಿ ಜಾನುವಾರಗಳ ಸಾಗಿಸುತ್ತಿದ್ದ ವ್ಯಕ್ತಿಗಳ ಹಿಡಿದು ಕೊಟ್ಟಿರುವುದು ತಪ್ಪೇ ಎಂದು ಪ್ರಶ್ನಿಸಿದರು.

ಜಾನುವಾರಗಳ ರಕ್ಷಣೆ ನಮ್ಮ ಹಿಂದೂಗಳ ರಕ್ಷಣೆಯಾಗಿದೆ. ಆದ್ದರಿಂದ ಪೊಲೀಸ್ ಸಮಕ್ಷಮದಲ್ಲಿ ಆರೋಪಿಗಳ ಹಿಡಿದು ಕೊಡಲಾಗಿದ್ದು, ಪ್ರಕರಣ ದಾಖಲಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಬಜರಂಗದಳದ ಪ್ರಮುಖರಾದ ಜಯತೀರ್ಥ ಕಟ್ಟಿ, ಅರುಣ ಪ್ರಭು, ಎಸ್.ಕೆ.ಕೊಟ್ರೇಶ, ಸುಬ್ರಹ್ಮಣ್ಯ ಶಿರಕೋಳ, ಮಲ್ಲಿಕಾರ್ಜುನ ಸತ್ತಿಗೇರಿ, ರಘು ಯಲಕ್ಕನವರ, ರಮೇಶ ಕದಂ ಇದ್ದರು.

ಘಟನೆಯ ವಿವರ:

ಶನಿವಾರ ರಾತ್ರಿ 9:30ರ ಸುಮಾರಿಗೆ ಧಾರವಾಡದಿಂದ ಹುಬ್ಬಳ್ಳಿ ಮಾರ್ಗವಾಗಿ ಎರಡು ಟಾಟಾಯೇಸ್ ವಾಹನದಲ್ಲಿ ಏಳು ಜಾನುವಾರ ಸಾಗಿಸುತ್ತಿರುವಾಗ ನಗರದ ಹೊಸುರ ಬಳಿ ವಿದ್ಯಾನಗರ ಪೊಲೀಸರ ಸಮಕ್ಷಮದಲ್ಲಿ ಹಿಡಿದು ರಕ್ಷಿಸಲಾಗಿತ್ತು. ಬಳಿಕ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಳ ವಶಕ್ಕೆ ಪಡೆದರು. ಇದಾದ ಬಳಿಕ ಮನೆಗೆ ತೆರಳುತ್ತಿರುವಾಗ ಠಾಣೆಯ ಮುಂದೆ ಕಾರಿಗೆ ಅಡ್ಡಗಟ್ಟಿ 15 ಜನರು ಜಾನುವಾರು ರಕ್ಷಣೆಗೆ ಯತ್ನಿಸಿದವರ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದರು. ಆದರೆ ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಬಜರಂಗದಳದ ಧಾರವಾಡ ವಿಭಾಗದ ಸಂಚಾಲಕ ಶಿವಾನಂದ ಸತ್ತಿಗೇರಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!