ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋಫಸ್ಟ್ (GoFirst) ಗೆ ಪರಿಹಾರವಾಗಿ ಏರ್ಲೈನ್ನ ಸಾಲದಾತರು ಸುಮಾರು 400 ಕೋಟಿ ರೂಪಾಯಿಗಳ ಮಧ್ಯಂತರ ನಿಧಿ ಅನುಮೋದಿಸಿದ್ದಾರೆ. ಇದರಿಂದಾಗಿ ಗೋಫ್ಟ್ ನಿರಾಳವಾಗಿದೆ.
ತಿಂಗಳ ಹಿಂದಷ್ಟೇ ಗೋಫಸ್ಟ್ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಮುಂದೆ ಸ್ವಯಂಪ್ರೇರಿತ ದಿವಾಳಿತನ ಪರಿಹಾರ ಪ್ರಕ್ರಿಯೆ ಕುರಿತು ಅರ್ಜಿ ಸಲ್ಲಿಸಿತ್ತು.ಈ ಮೂಲಕ ಆರ್ಥಿಕ ದಿವಾಳಿ ಹಂತದ ಈ ವಿಮಾನಯಾನ ಸಂಸ್ಥೆಯು ರದ್ದಾದ ತನ್ನ ವಿಮಾನಗಳ ದೇಶೀಯ ಕಾರ್ಯಾಚರಣೆ ಆರಂಭಿಸಲು ಹಣದ ಹುಡುಕಾಟ ಆರಂಭಿಸಿತ್ತು.
ಇದರ ಬೆನ್ನಲ್ಲೇ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಡಾಯ್ಚೆ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ ಒಳಗೊಂಡ ಏರ್ಲೈನ್ಸ್ ಸಾಲಗಾರರ ಸಮಿತಿಯು (ಸಿಒಸಿ) ಹೆಚ್ಚುವರಿ ನಿಧಿಯ ಕೋರಿಕೆಯನ್ನು ಅನುಮೋದಿಸಿದೆ.
ಸುಮಾರು 400 ಕೋಟಿ ರೂಪಾಯಿ ಒದಗಿಸಲು ಅನುಮೋದನೆ ನೀಡಿದ್ದಾರೆ. ಇದು ಗೋಫಸ್ಟ್ ವಿಮಾನಗಳ ಕಾರ್ಯಾಚರಣೆ ಪುನಾರಂಭಕ್ಕೆ ಅನುಕೂಲವಾಗಿದೆ ಎಂದು ಬ್ಯಾಂಕರ್ ಒಬ್ಬರು ಹೇಳಿದ್ದಾರೆ .
ಸದ್ಯ ಗೋ ಫಸ್ಟ್ ಏರ್ಲೈನ್ಸ್ ಸಂಸ್ಥೆಯು ತನ್ನ ವಿಮಾನಗಳನ್ನು ಜುಲೈ ತಿಂಗಳಲ್ಲಿ ಕಾರ್ಯಾಚರಣೆ ಪುನರ್ ಆರಂಭಕ್ಕೆ ಚಿಂತಿಸುತ್ತಿದೆ. 22 ವಿಮಾನಗಳೊಂದಿಗೆ 78 ದೈನಂದಿನ ವಿಮಾನಗಳನ್ನು ನಿರ್ವಹಿಸಲು ಸಂಸ್ಥೆ ಪ್ಲಾನ್ ಮಾಡಿಕೊಂಡಿದೆ. ಈ ಕಾರ್ಯಾಚರಣೆಗೆ ಅನುಮೋದಿತ ಹಣ ಸೇರಿದಂತೆ ಇನ್ನಿತರ ಅಂಶಗಳ ಮೇಲೆ ಅವಲಂಬಿತವಾಗಿದೆ ಎಂದು ಹೇಳಲಾಗಿದೆ.