ಹೊಸದಿಗಂತ ವರದಿ ಕೊಪ್ಪಳ:
ಕೊಪ್ಪಳದಿಂದ-ಹೊಸಪೇಟೆಗೆ ಹೊರಟಿದ್ದ ತಡೆ ರಹಿತ ಬಸ್ ಗೆ ಮಹಿಳೆ ಬಸ್ ಗೆ ಕಲ್ಲೆಸೆದಿದ್ದಾಳೆ. ಕಲ್ಲು ಎಸೆದ ಹಿನ್ನೆಲೆ ಪ್ರಯಾಣಿಕರ ಸಮೇತ ಬಸ್ ಚಾಲಕ ಪೊಲೀಸ್ ಠಾಣೆಗೆ ಬಂದಿರುವ ಘಟನೆ ಜರುಗಿದೆ.
ಕೊಪ್ಪಳದ ಹೊಸಲಿಂಗಾಪುರ ಬಳಿ ಬಸ್ ನಿಲ್ಲಿಸದ ಕೋಪಕ್ಕೆ ಲಕ್ಷ್ಮೀ ಎಂಬಾಕೆ ಕಲ್ಲು ತೂರಿದಾರೆ. ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದರು ಎನ್ನಲಾಗಿದೆ. ಹೊಸಪೇಟೆಯಿಂದ ತನ್ನ ಊರಿಗೆ ತೆರಳಲು ಬಸ್ ಗಾಗಿ ಕಾದು ಕುಳಿತಿದ್ದರು. ಯಾವುದೇ ಬಸ್ ನಿಲ್ಲಿಸದಿರುವ ಬಗ್ಗೆ ಅಸಮಾಧಾನಗೊಂಡು ಬಸ್ ಗೆ ಕಲ್ಲು ತೂರಿದ್ದಾಳೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.