ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನ ಹಾರಿಸೋದಿಲ್ಲ ಎಂದು ಏರ್ ಇಂಡಿಯಾ ಪೈಲಟ್ ಹೇಳಿದ್ದು, ಐದು ಗಂಟೆಗಳ ಕಾಲ ಪ್ರಯಾಣಿಕರು ಕಾದು ಕುಳಿತ ಸಂದರ್ಭ ಎದುರಾಗಿತ್ತು.
ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೆಟ್ಟ ಹವಾಮಾನ ಪರಿಸ್ಥಿತಿಯಿಂದಾಗಿ ಜೈಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ತದನಂತರ ಮತ್ತೆ ಫ್ಲೈಟ್ ಟೇಕ್ಆಫ್ ಮಾಡೋದಕ್ಕೆ ಪೈಲಟ್ ನೋ ಎಂದಿದ್ದಾರೆ.
ಇದರಿಂದಾಗಿ ಸುಮಾರು 350 ಪ್ರಯಾಣಿಕರು, ಐದು ಗಂಟೆಗಳ ಕಾಲ ಜೈಪುರ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದರು. ಪೈಲಟ್ ಏಕಾಏಕಿ ನಿರಾಕರಣೆ ಮಾಡಿದ್ದು, ಫ್ಲೈಟ್ನಿಂದ ಕೆಳಗೆ ಇಳಿದಿದ್ದಾರೆ. ತದನಂತರ ಕೆಲವರನ್ನು ರಸ್ತೆಯ ಮೂಲಕ ದೆಹಲಿಗೆ ಕಳುಹಿಸಲಾಗಿದೆ.