ಈಗಿನ ಮಕ್ಕಳ ಲೈಫ್ಸ್ಟೈಲ್ ಹೇಗಿದೆ? ಶಾಲೆಗೆ ಹೋಗ್ತಾರೆ, ಮನೆಗೆ ಬರ್ತಾರೆ, ಮೊಬೈಲ್ ನೋಡ್ತಾರೆ, ಜಂಕ್ ತಿಂತಾರೆ, ಒಂದು ಲೋಟ ನೀರು ಕೊಡು ಎಂದು ಕೇಳಿದ್ರೂ ಕಿರಿಕಿರಿ ಮಾಡ್ಕೋತಾರೆ. ಐದು ವರ್ಷದ ಹೆಣ್ಣುಮಕ್ಕಳೆಲ್ಲ ಪಿರಿಯಡ್ಸ್ ಆಗುತ್ತಾರೆ. ತಮ್ಮ ವಯಸ್ಸಿಗಿಂತ ತೂಕ ಹೆಚ್ಚಾಗಿರೋ ಮಕ್ಕಳ ತೂಕ ಇಳಿಸೋದು ಹೇಗೆ? ಅಥವಾ ತೂಕ ಹೆಚ್ಚಾಗದಂತೆ ಕಾಪಾಡೋದು ಹೇಗೆ ನೋಡಿ..
ಮೊದಲು ನೀವು ಸೂಕ್ತವಾದ ಆಹಾರ ತಿನ್ನಿ, ಸುಸ್ತಾಯಿತು ಎಂದು ದಿನವೂ ಹೊಟೇಲ್ಗೆ ಹೋಗೋದು, ಸಂಜೆ ಸ್ನ್ಯಾಕ್ಸ್ ತಿಂದು ಹಾಗೇ ಮಲಗುವ ಅಭ್ಯಾಸ ಮಾಡಬೇಡಿ, ಮಕ್ಕಳು ನಿಮ್ಮನ್ನೇ ಫಾಲೋ ಮಾಡ್ತಾರೆ.
ಇಡೀ ಕುಟುಂಬ ವ್ಯಾಯಾಮ, ಯೋಗ ಹಾಗೂ ಜಿಮ್ನಲ್ಲಿ ಆಸಕ್ತಿ ಇಡಿ, ಮನೆಯಲ್ಲಿ ವ್ಯಾಯಾಮ ಮಾಡುವುದು, ಮಕ್ಕಳನ್ನು ಯೋಗಕೇಂದ್ರಗಳಿಗೆ ಹಾಕುವುದು ಉತ್ತಮ ಅಭ್ಯಾಸ.
ಯೋಗ ಜಿಮ್ ಇಷ್ಟವಿಲ್ಲದ ಮಕ್ಕಳಿಗೆ ಸ್ವಿಮಿಂಗ್, ಸ್ಪೋರ್ಟ್ಸ್ಗೆ ಸೇರಿಸಿ. ಅಲ್ಲಿಯೂ ದೈಹಿಕ ಶ್ರಮ ಬೇಕೇ ಬೇಕಲ್ಲ.
ಟಿವಿ ನೋಡುತ್ತಾ ಊಟ ಮಾಡುವ ಅಭ್ಯಾಸ ಬೇಡ, ಎಷ್ಟು ತಿಂದೆ ಎನ್ನುವ ಪರಿವೇ ಇಲ್ಲದಂತೆ ಊಟ ಮಾಡ್ತಾರೆ. ಎಲ್ಲರೂ ಒಟ್ಟಿಗೇ ಕೂತು ಊಟ ಮಾಡಿ.
ಅವರ ಹೊಟ್ಟೆಗೆ ಎಷ್ಟು ಬೇಕು ಅನ್ನೋದನ್ನು ನೀವು ನಿರ್ಧಾರ ಮಾಡಬೇಡಿ, ಹಸಿವಾದಾಗಲೇ ಊಟ ಮಾಡಲಿ. ಹಸಿವಿಲ್ಲದಾಗ ಹಾಳೂಮೂಳು ಕೊಡಬೇಡಿ.
ಓದಿದರೆ ಚಿಪ್ಸ್ ಕೊಡಿಸ್ತೇನೆ, ರ್ಯಾಂಕ್ ಬಂದರೆ ಮ್ಯಾಗಿ ಕೊಡಿಸ್ತೇನೆ, ಹೋಮ್ ವರ್ಕ್ ಮಾಡಿದ್ರೆ ಮಸಾಲೆಪುರಿ ತಿನ್ನಿಸ್ತೀನಿ ಎನ್ನುವ ಆಸೆ ತೋರಿಸ್ಬೇಡಿ.
ಮೈದಾ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಕೊಡಬೇಡಿ.
ನೀರು ಕುಡಿಸಿ, ಜ್ಯೂಸ್ ಅಲ್ಲ, ನೀರು ಹೆಚ್ಚು ಕುಡಿಯಲು ಎನ್ಕರೇಜ್ ಮಾಡಿ.