ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಐಶ್ವರ್ಯಾ ಸರ್ಜಾ ಸದ್ದಿಲ್ಲದೇ ಮದುವೆ ತಯಾರಿಯಲ್ಲಿದ್ದಾರೆ. ಅರ್ಜುನ್ ಸರ್ಜಾ ಅವರು ಮಗಳಿಗೆ ಅರೇಂಜ್ ಮ್ಯಾರೇಜ್ ಮಾಡುತ್ತಿದ್ದು, ಮದುವೆ ತಯಾರಿ ಆರಂಭವಾಗಿದೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿದೆ.
ತಮಿಳು ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಅವರ ಜೊತೆ ಐಶ್ವರ್ಯ ಮದುವೆ ಎನ್ನಲಾಗಿದೆ, ಕೆಲವರು ಇದು ಲವ್ ಮ್ಯಾರೇಜ್ ಎಂದೂ ಹೇಳ್ತಿದ್ದಾರೆ. ಪ್ರೇಮ ಬರಹ ಮೂಲಕ ಕನ್ನಡ ಸಿನಿಮಾಗೆ ಎಂಟ್ರಿ ಕೊಟ್ಟ ಐಶ್ವರ್ಯ ಸಿನಿಮಾಗಳಲ್ಲಿ ಅಷ್ಟು ಸಕ್ರಿಯವಾಗಿಲ್ಲ. ಇದೀಗ ಮದುವೆ ಮೂಲಕ ಐಶ್ವರ್ಯ ಮತ್ತೆ ಸುದ್ದಿಯಾಗ್ತಿದ್ದಾರೆ.