ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಳಿ ಸಂಜೆಯ ಹೊತ್ತಿಗೆ ಮಳೆ ಬರುವ ವೇಳೆ ನಾಲಿಗೆ ಚಪ್ಪರಿಸುತ್ತಾ ಏನಾದರು ತಿನ್ನೋದು ಅಂದ್ರೆ ಒಂಥರಾ ಖುಷಿ. ಆ ಖುಷಿ ನಿಮಗೂ ಸಿಗಬೇಕು ಅಂದ್ರೆ ಒಮ್ಮೆ ಮಾಡಿ ಸವಿದು ನೋಡಿ ಉತ್ತರ ಕರ್ನಾಟಕ ಶೈಲಿಯ ಗಿರ್ಮಿಟ್. ಗಿರ್ಮಿಟ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನವನ್ನು ಇಲ್ಲಿ ತಿಳಿಯಿರಿ.
ಬೇಕಾಗಿರುವ ಸಾಮಾಗ್ರಿಗಳು:
1 ಮಂಡಕ್ಕಿ/ಕಡಲೆಪುರಿ
2 ಹುಣಸೆ ರಸ
3 ಟೊಮೇಟೊ
4 ಈರುಳ್ಳಿ
5 ಕೊತ್ತಂಬರಿ ಸೊಪ್ಪು
6 ಹುರಿಗಡಲೆ ಪುಡಿ
7 ಹಸಿರು ಮೆಣಸಿನಕಾಯಿ
8 ಎಣ್ಣೆ
9 ಜೀರಿಗೆ
10 ಸಾಸಿವೆ
11 ಬೆಲ್ಲ
12 ಉಪ್ಪು
13 ಕರಿಬೇವು
14 ಅರಿಶಿಣ ಪುಡಿ
15 ಸೇವ್/ಖಾರ ಬೂಂದಿ
ಮಾಡುವ ವಿಧಾನ:
* ಒಂದು ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಒಗ್ಗರಣೆಗೆ ಸಾಸಿವೆ, ಜೀರಿಗೆ ಹಾಕಿ.
* ನಂತರ ಸಣ್ಣಗೆ ಹಚ್ಚಿದ ಹಸಿರು ಮೆಣಸಿನಕಾಯಿ, ಕರಿಬೇವು ಹಾಕಿ ಸ್ವಲ್ಪ ಫ್ರೈ ಮಾಡಿ.
* ನಂತರ ಅರಿಶಿಣ ಮತ್ತು ಸಣ್ಣಗೆ ಹಚ್ಚಿದ ಈರುಳ್ಳಿಯಲ್ಲಿ ಮುಕ್ಕಾಲು ಭಾಗದಷ್ಟು ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ.
* ಸ್ವಲ್ಪ ಹುಣಸೆರಸ ಮತ್ತು ಬೆಲ್ಲ ಹಾಕಿ ಮಿಕ್ಸ್ ಮಾಡಿಕೊಳ್ಳಿ.
* ರುಚಿಗೆ ತಕ್ಕಷ್ಟು ಉಪ್ಪು ಹಾಕಿ 2 ನಿಮಿಷ ಕುದಿಸಿ, ಸ್ವಲ್ಪ ಗಟ್ಟಿಯಾದ ನಂತರ ಒಲೆಯಿಂದ ಕೆಳಗಿಳಿಸಿದ್ರೆ ಗಿರ್ಮಿಟ್ ಮಸಾಲಾ ಸಿದ್ಧ.
* ಮತ್ತೊಂದು ಪಾತ್ರೆಯಲ್ಲಿ ಮಂಡಕ್ಕಿ ಹಾಕಿ ಅದಕ್ಕೆ ಗಿರ್ಮಿಟ್ ಮಸಾಲಾ, ಸಣ್ಣಗೆ ಕತ್ತರಿಸಿದ ಟೊಮೆಟೊ, ಉಳಿದಿರೋ ಈರುಳ್ಳಿ, ಹುರಿಗಡಲೆ ಪುಡಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಡಿ.
* ಕೊನೆಯಲ್ಲಿ ಸ್ವಲ್ಪ ಸೇವ್/ ಖಾರ ಬೂಂದಿ ಉದುರಿದರೆ ಉತ್ತರ ಕರ್ನಾಟಕ ಶೈಲಿಯ ಗಿರ್ಮಿಟ್ ಸವಿಯಲು ಸಿದ್ಧ.