ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಆಯ್ಕೆಯಾದ ಶಾಸಕರು ವಿಧಾನಸಭಾ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.
ಇಂದು 16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರುಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು,ಹಲವರಿಗೆ ತಮ್ಮ ಜೀವನದಲ್ಲಿ ಒಂದು ಬಾರಿಯಾದರೂ ಶಾಸಕನಾಗಬೇಕು ಎಂಬ ಆಸೆ ಇರುತ್ತೇ.ಆದರೆ, ಶಾಸಕನಾದ ಮೇಲೆ ವಿಧಾನಸೌಧದ ಒಳಗಡೆಯೇ ಬರುವುದಿಲ್ಲ. ಇದು ಸರಿಯಲ್ಲ. ಪ್ರತಿಯೊಬ್ಬ ಶಾಸಕರು ಸದನಕ್ಕೆ ತಪ್ಪದೇ ಹಾಜರಾಗುವ ಮೂಲಕ ಮತ್ತೊಬ್ಬರಿಗೆ ಸ್ಫೂರ್ತಿಯಾಗಬೇಕು ಎಂದರು.
ಈಗಿನ ಕಾಲದಲ್ಲಿ ಶಾಸಕರಾಗುವುದು ಬಹಳ ಕಷ್ಟವಿದೆ. ಅನೇಕರು ಹೋರಾಟ ಮಾಡಿ ವಿಧಾನಸಭೆ ಬಂದಿದ್ದಾರೆ. ಜನರು ಕೂಡ ಎಲ್ಲರ ಮೇಲೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಯನ್ನು ಹುಸಿ ಮಾಡಬೇಡಿ. ಎಲ್ಲರೂ ಜನರ ಪರವಾಗಿ ನಿಷ್ಟೆಯಿಂದ ಕೆಲಸ ಮಾಡಿ ಎಂದರು.