ಹೊಸದಿಗಂತ ಡಿಜಿಟಲ್ ಡೆಸ್ಕ್:
‘ದಿ ಕೇರಳ ಸ್ಟೋರಿ’ (The Kerala Story) ದೇಶ ವಿದೇಶಗಳಲ್ಲಿ ಸದ್ದು ಮಾಡಿರುವ ಸಿನಿಮಾ.ಇದೀಗ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಸುದೀಪ್ತೋ ಸೇನ್ (Sudipto Sen) ಹಾಗೂ ಬಂಡವಾಳ ಹೂಡಿದ್ದ ವಿಪುಲ್ ಅಮೃತ್ಲಾಲ್ ಶಾ ಅವರು ಮತ್ತೊಂದು ಹೊಸ ಚಿತ್ರಕ್ಕಾಗಿ ಒಂದಾಗಿದ್ದಾರೆ.
ಹೌದು, ಇಬ್ಬರ ಕಾಂಬಿನೇಷನ್ನಲ್ಲಿ ‘ಬಸ್ತರ್’ (Bastar) ಎಂದು ಹೆಸರಿನ ಸಿನಿಮಾ ಮಾಡಿಬರಲಿದೆ. ಟೈಟಲ್ ಪೋಸ್ಟರ್ ಅನಾವರಣ ಮಾಡಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಾರಿ ಕೂಡ ಅವರಿಬ್ಬರು ಒಂದು ರಿಯಲ್ ಲೈಫ್ ಘಟನೆಯನ್ನು ಇಟ್ಟುಕೊಂಡು ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ.
‘ದಿ ಕೇರಳ ಸ್ಟೋರಿ’ ಸಿನಿಮಾ ನಿರ್ಮಾಣ ಆಗಿದ್ದು ‘ಸನ್ಶೈನ್ ಪಿಕ್ಚರ್ಸ್’ ಸಂಸ್ಥೆ ಮೂಲಕ. ಈಗ ‘ಬಸ್ತರ್’ ಚಿತ್ರ ಕೂಡ ಇದೇ ಬ್ಯಾನರ್ ಮೂಲಕ ಮೂಡಿಬರಲಿದೆ. ಈ ಸಿನಿಮಾದಲ್ಲಿ ಯಾರು ನಟಿಸಲಿದ್ದಾರೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ.
‘ಬಸ್ತರ್’ ಪೋಸ್ಟರ್ ನಲ್ಲಿ ನಮಗೆ ದಟ್ಟ ಅರಣ್ಯದಲ್ಲಿ ಕೆಂಪು ಬಾವುಟ ಇದೆ. ನೆಲಕ್ಕೆ ಉರುಳಿದ ಮರ ಹೈಲೈಟ್ ಆಗಿದೆ. ಗನ್ ಮತ್ತು ಹೊಗೆ ಕೂಡ ಈ ಪೋಸ್ಟರ್ನಲ್ಲಿ ಇದೆ. ‘ದೇಶದಲ್ಲಿ ಸಂಚಲನ ಮೂಡಿಸಲಿದೆ ಅಡಗಿದ ಸತ್ಯ’ ಎಂಬ ಕ್ಯಾಪ್ಷನ್ ಗಮನ ಸೆಳೆಯುತ್ತಿದೆ. ಈ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಈಗಲೇ ಅನೌನ್ಸ್ ಮಾಡಲಾಗಿದೆ. 2024ರ ಏಪ್ರಿಲ್ 5ರಂದು ‘ಬಸ್ತರ್’ ತೆರೆಕಾಣಲಿದೆ ಎಂದು ಪೋಸ್ಟರ್ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.