ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆಲಮಂಗಲದ ಬಳಿಯ ಕ್ಷೇಮವನದಲ್ಲಿ ನೂತನ ಶಾಸಕರಿಗೆ ಆಯೋಜಿಸಿರುವ ತರಬೇತಿ ಶಿಬಿರದಲ್ಲಿ ಶಾಸಕರೊಂದಿಗೆ ನಡೆಸಿದ ಸಂವಾದದಲ್ಲಿ ಸಿಎಂ ಸಿದ್ದರಾಮಯ್ಯ ಅನೇಕ ವಿಚಾರಗಳನ್ನು ನೆನಪಿಸಿಕೊಂಡರು.
ಇಂದಿರಾಗಾಂಧಿ ಪ್ರಧಾನಿಯಾಗಿದ್ದಾ ಗ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದೆ ಹಾಗೂ ಅದಕ್ಕಾಗಿ ಜೈಲಿಗೂ ಹೋಗಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಸ್ಮರಿಸಿಕೊಂಡಿದ್ದಾರೆ.
ಶಿವಮೊಗ್ಗ ಬಿಜೆಪಿ ಶಾಸಕ ಚನ್ನಬಸಪ್ಪ ತುರ್ತುಪರಿಸ್ಥಿತಿಯ ಕುರಿತು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಪ್ರಉತ್ತರಿಸುತ್ತಾ, ತುರ್ತು ಪರಿಸ್ಥಿತಿಯನ್ನು ನಾನು ವಿರೋಧಿಸಿದ್ದೆ. ತುರ್ತು ಪರಿಸ್ಥಿತಿಯನ್ನ ವಿರೋಧಿಸಿ ಭಾಷಣ ಮಾಡಿದ್ದೆ. ಮೈಸೂರಿನ ಸೈಯಾಜಿರಾವ್ ರಸ್ತೆಯಲ್ಲಿ ಟೇಬಲ್ ಹಾಕಿಕೊಂಡು ಭಾಷಣ ಮಾಡಿದ್ದೆ. ತುರ್ತು ಪರಿಸ್ಥಿತಿ ವಿರೋಧಿಸಿ ಹ್ಯಾಂಡ್ ಬಿಲ್ ಹಂಚಿದ್ದೆ. ಪೊಲೀಸರು ಒದ್ದು ಒಳಗೆ ಹಾಕಿದ್ದರು. ದೇವರಾಜ ಠಾಣೆ ಪೊಲೀಸರು ಒಂದು ದಿನ ಜೈಲಿಗೆ ಹಾಕಿದ್ದರು. ತುರ್ತುಪರಿಸ್ಥಿತಿ ತೀವ್ರವಾಗಿ ವಿರೋಧಿಸಿದ್ದೆ ಎಂದರು.
ಬಳಿಕ ಶಾಸಕ ಸಿದ್ದು ಪಾಟೀಲ್ ಏಕೆ ಮೊಬೈಲ್ ಬಳಸುವುದಿಲ್ಲ ಎಂಬ ಕುರಿತು ಕೇಳಿದ ಪ್ರಶ್ನೆಗೆಉತ್ತರಿಸಿದ ಸಿಎಂ, ಆರು ತಿಂಗಳು ಮೊಬೈಲ್ ಬಳಕೆ ಮಾಡಿದ್ದೆ. ಜನ ಮಧ್ಯ ರಾತ್ರಿ ಒಂದು ಗಂಟೆಗೆ ಕರೆ ಮಾಡುತ್ತಿದ್ದರು. ಕೆಲವರು ಕುಡಿದು ಕರೆ ಮಾಡುತ್ತಿದ್ದರು. ಅದಕ್ಕೆ ಮೊಬೈಲ್ ಬಳಕೆ ಬಿಟ್ಟೆ. ಈಗ ಆಪ್ತ ಸಹಾಯಕರು ಮೊಬೈಲ್ ಮ್ಯಾನೇಜ್ ಮಾಡ್ತಾರೆ ಎಂದರು.
ಈಗಿನ ಕಾಲದ ರಾಜಕೀಯಕ್ಕೂ, ನಿಮ್ಮ ಕಾಲದ ರಾಜಕೀಯಕ್ಕೆ ವ್ಯತ್ಯಾಸ ಏನು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಕಾಲದಲ್ಲಿ ಪಕ್ಷಾಂತರ ಇರಲಿಲ್ಲ. ಅಪರೇಷನ್ ಕಮಲ, ಅಮರೇಷನ್ ಕಾಂಗ್ರೆಸ್, ಅಪರೇಷನ್ ತೆನೆಹೊತ್ತ ಮಹಿಳೆ ಇದ್ಯಾವುದು ಇರಲಿಲ್ಲ ಎಂದರು.