ಬಂಡವಾಳ ಹೂಡಿಕೆಗಾಗಿ ಕರ್ನಾಟಕ ಸಹಿತ 16 ರಾಜ್ಯಗಳಿಗೆ 56,415 ಕೋಟಿ ರೂ. ಅನುದಾನ ನೀಡಿದ ಕೇಂದ್ರ ಸರಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇಂದ್ರ ಸರಕಾರ 2023-24 ಹಣಕಾಸು ವರ್ಷದ ವಿಶೇಷ ಯೋಜನೆ ಅಡಿಯಲ್ಲಿ ಬಂಡವಾಳ ಹೂಡಿಕೆಗಾಗಿ 16 ರಾಜ್ಯಗಳಿಗೆ 56,415 ಕೋಟಿ ರೂ ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ಸೇರಿದಂತೆ 16 ರಾಜ್ಯಗಳಿಗೆ ಬಂಡವಾಳ ಹೂಡಿಕೆಗೆ ಹಣಕಾಸು ಬಿಡುಗಡೆಗೊಳಿಸಲಾಗಿದೆ. ಈ ಯೋಜನೆಯಡಿ ಕರ್ನಾಟಕಕ್ಕೆ 3647 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಆರೋಗ್ಯ, ಶಿಕ್ಷಣ, ನೀರಾವರಿ, ನೀರು ಸರಬರಾಜು, ವಿದ್ಯುತ್, ರಸ್ತೆಗಳು, ಸೇತುವೆಗಳು ಮತ್ತು ರೈಲ್ವೆ ಸೇರಿದಂತೆ ವಿವಿಧ ವಲಯಗಳಲ್ಲಿ ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

2023-24 ರ ಕೇಂದ್ರ ಬಜೆಟ್‌ನಲ್ಲಿ ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು 2023-24 ಯೋಜನೆಯನ್ನು ಘೋಷಿಸಲಾಗಿತ್ತು. ಇದೀಗ ಬಜೆಟ್ ನಲ್ಲಿ ಘೋಷಣೆ ಮಾಡಿದ ಯೋಜನೆಯಂತೆ ಹಣ ಬಿಡುಗಡೆ ಮಾಡಲಾಗಿದೆ.

ದೇಶದ 16 ರಾಜ್ಯಗಳಿಗೆ ಕೇಂದ್ರದಿಂದ ಬಿಡುಗಡೆಯಾದ ಮೊತ್ತ
ಕರ್ನಾಟಕ : 3647 ಕೋಟಿ
ಅರುಣಾಚಲ ಪ್ರದೇಶ : 1255 ಕೋಟಿ
ಬಿಹಾರ : 9640 ಕೋಟಿ
ಛತ್ತೀಸ್‌ಗಢ: 3195 ಕೋಟಿ
ಗೋವಾ : 386 ಕೋಟಿ
ಗುಜರಾತ್: 3478 ಕೋಟಿ
ಹರಿಯಾಣ: 1093 ಕೋಟಿ
ಹಿಮಾಚಲ ಪ್ರದೇಶ: 826 ಕೋಟಿ
ಮಧ್ಯಪ್ರದೇಶ: 7850 ಕೋಟಿ
ಮಿಜೋರಾಂ: 399 ಕೋಟಿ
ಒಡಿಶಾ: 4528 ಕೋಟಿ
ರಾಜಸ್ಥಾನ: 6026 ಕೋಟಿ
ಸಿಕ್ಕಿಂ: 388 ಕೋಟಿ
ತಮಿಳುನಾಡು: 4079 ಕೋಟಿ
ತೆಲಂಗಾಣ: 2102 ಕೋಟಿ
ಪಶ್ಚಿಮ ಬಂಗಾಳ: 7523 ಕೋಟಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!