ಕೇರಳದತ್ತ ಹೊರಟ ಬೆಂಗಳೂರು ಸ್ಫೋಟದ ಮಾಸ್ಟರ್‌ಮೈಂಡ್‌ ಮದನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

2008ರ ಬೆಂಗಳೂರು ಸ್ಫೋಟದ ರೂವಾರಿ, ಪಿಡಿಪಿ ಪಕ್ಷದ (PDP President) ಅಧ್ಯಕ್ಷ ಅಬ್ದುಲ್‌ ನಾಸಿರ್‌ ಮದನಿ (Abdul Nasir Madani) ಬೆಂಗಳೂರು ಜೈಲಿನಿಂದ ಕೇರಳದ (Bangalore to Kerala) ಮನೆಯತ್ತ ತೆರಳಿದ್ದಾರೆ.

ಬೆಂಗಳೂರು ಜೈಲಿನಲ್ಲಿರುವ (Bangalore Jail) ಮದನ ಸೋಮವಾರ ಸಂಜೆ 6.15ರ ವಿಮಾನದಲ್ಲಿ ಕೊಚ್ಚಿನ್‌ಗೆ ಪ್ರಯಾಣ ಬೆಳೆಸಿದ್ದು, ಈ ವೇಳೆ ಮದನಿಯ ಪತ್ನಿ ಮತ್ತು ಇತರರು ಆಗಮಿಸಿದ್ದರು.

ಮದನಿಯನ್ನು ಕೇರಳದ ಮನೆಗೆ ಕರೆದೊಯ್ಯಲಾಗುತ್ತಿದ್ದು, ಆತನ ಭದ್ರತೆಗೆ ಒಬ್ಬ ಎಸ್‌ಐ, ಮೂವರು ಕಾನ್‌ಸ್ಟೇಬಲ್‌ಗಳು, ಒಬ್ಬ ನಿಯೋಜನೆ ಮಾಡಲಾಗಿದೆ.

ಮದನಿ 2008ರ ಜುಲೈ 25ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನ ಪಕ್ಕದಲ್ಲಿ ಒಂಬತ್ತು ಕಡಿಮೆ ತೀವ್ರತೆಯ ಬಾಂಬ್‌ಗಳು ಸ್ಫೋಟಿಸಿದ್ದವು. ಇದರಲ್ಲಿ ಒಬ್ಬ ಸಾವನ್ನಪ್ಪಿದ್ದು, 9 ಮಂದಿಗೆ ಗಾಯಗಳಾಗಿತ್ತು. ಪೊಲೀಸರ ತನಿಖೆಯಲ್ಲಿ ಅಬ್ದುಲ್‌ ನಾಸಿರ್‌ ಮದನಿಯೇ ಈ ಸ್ಫೋಟದ ಮಾಸ್ಟರ್‌ಮೈಂಡ್‌ ಎಂಬುದು ಬಯಲಾಗಿತ್ತು. ಹಾಗಾಗಿ ಆತನನ್ನು ಕಸ್ಟಡಿಗೆ ಪಡೆಯಲಾಗಿತ್ತು. ನಂತರ ವಿಚಾರಣೆಗಳು ನಡೆಯುತ್ತಲೇ ಇದೆ. ಬೆಂಗಳೂರಿನ ಜೈಲಿನಲ್ಲಿದ್ದರು.

57 ವರ್ಷದ ಮದನಿ ದೀರ್ಘ ಕಾಲದಿಂದ ಜೈಲಿನಲ್ಲಿದ್ದು, ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ಅದರ ಜತೆಗೆ ಆತನ ತಂದೆಯ ಆರೋಗ್ಯವೂ ಹದಗೆಟ್ಟಿದೆ. ಹೀಗಾಗಿ ಕೇರಳದಲ್ಲಿರುವ ಮನೆಗೆ ಹೋಗಿ ತಂದೆಯವರನ್ನು ನೋಡಿಕೊಂಡು ಬರುತ್ತೇನೆ, ಜತೆಗೆ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದು ಬರುತ್ತೇನೆ ಎಂದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದನು.

ಮದನಿ ಮತ್ತು ತಂದೆಯ ಆರೋಗ್ಯ ಸ್ಥಿತಿಗಳೆರಡರ ಬಗ್ಗೆಯೂ ವೈದ್ಯಕೀಯ ವರದಿಗಳನ್ನು ಪಡೆದ ಸು.ಕೋರ್ಟ್‌ ಜೂನ್‌ 26ರಿಂದ ಜುಲೈ 07ರವರೆಗೆ 12 ದಿನ ಕೇರಳದ ಮನೆಯಲ್ಲಿರಲು ಕೋರ್ಟ್‌ ಅವಕಾಶ ನೀಡಿದೆ. ಮತ್ತು ಆತನನ್ನು ಕೇರಳಕ್ಕೆ ಕರೆದುಕೊಂಡು ಹೋಗಿ ವಾಪಪ್‌ ಕರೆದು ತರುವ ಜವಾಬ್ದಾರಿಯನ್ನು ಕರ್ನಾಟಕ ಪೊಲೀಸರಿಗೆ ಒಪ್ಪಿಸಿದೆ.

ಕರ್ನಾಟಕದ ಭಯೋತ್ಪಾದನೆ ನಿಗ್ರಹ ವಿಭಾಗ ಮದನಿಯ ಮನವಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಮದನಿಯ ಮೇಲಿರುವುದು ಸಣ್ಣ ಪ್ರಕರಣವೇನಲ್ಲ. ದೇಶದ ಭದ್ರತೆ ಮತ್ತು ಸಮಗ್ರತೆಯ ಮೇಲೆ ಪರಿಣಾಮ ಬೀರಬಹುದಾದ ಪ್ರಕರಣ. ಒಂದೊಮ್ಮೆ ಆತನಿಗೆ ಜಾಮೀನು ನೀಡಿದರೆ ಆತ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಜತೆಗೆ ಈ ಪ್ರಕರಣದಲ್ಲಿ ಇನ್ನೂ ಆರು ಮಂದಿ ಬಂಧಿಸಲ್ಪಟ್ಟಿಲ್ಲ. ಅವರು ಮದನಿಯನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಜತೆಗೆ ಪ್ರಕರಣದ ಸಾಕ್ಷಿದಾರರಿಗೆ ಬೆದರಿಕೆ ಒಡ್ಡುವ ಸಾಧ್ಯತೆ ಇದೆ ಎಂದು ಹೇಳಿತ್ತು. ಆದರೆ, ಸುಪ್ರೀಂಕೋರ್ಟ್‌ ಈ ವಾದವನ್ನು ಒಪ್ಪದೆ ಮನೆಗೆ ಹೋಗಿ ಬರಲು ಅವಕಾಶ ನೀಡಿದೆ.

ಮದನಿಯನ್ನು ಕೇರಳದ ಮನೆಗೆ ಕರೆದೊಯ್ದು ಮರಳಿ ಕರೆತರುವ ಜವಾಬ್ದಾರಿಯನ್ನು ಕರ್ನಾಟಕ ಪೊಲೀಸರಿಗೆ ಒಪ್ಪಿಸಿರುವ ಸುಪ್ರೀಂಕೋರ್ಟ್‌ ಹೀಗೆ ಕರೆದೊಯ್ದು ಮರಳಿ ಕರೆ ತರಲು ಬೇಕಾಗುವ ಖರ್ಚನ್ನು ಮದನಿಯೇ ಭರಿಸಬೇಕು ಎಂದು ಸೂಚಿಸಿತ್ತು. ಇದರ ವೆಚ್ಚವಾದ 6,76,101 ರೂ.ಯನ್ನು ಈಗಾಗಲೇ ಮದನಿ ಪಾವತಿಸಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!