ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮನ್ನಾ ಚಿತ್ರರಂಗಕ್ಕೆ ಬಂದು 17 ವರ್ಷವಾದರೂ ಸತತವಾಗಿ ಸಿನಿಮಾ ಮಾಡುತ್ತಿದ್ದಾರೆ. ಸೌತ್‌ನಲ್ಲಿ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿರುವ ತಮನ್ನಾ ಇದೀಗ ಸೌತ್‌ನೊಂದಿಗೆ ಬಾಲಿವುಡ್‌ನಲ್ಲೂ ಸರಣಿ ಚಿತ್ರಗಳನ್ನು ಮಾಡುತ್ತಿದ್ದಾರೆ. ಇಷ್ಟು ಫೇಮಸ್ ನಡಿಗೆ ಫ್ಯಾನ್ಸ್ ಕೂಡ ಕಡಿಮೆಯೇನಲ್ಲ.
ದಕ್ಷಿಣ ಮತ್ತು ಬಾಲಿವುಡ್‌ನಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಅಭಿಮಾನಿಯೊಬ್ಬರು ತಮನ್ನಾ ಅವರನ್ನು ಭೇಟಿ ಮಾಡಿದ ಭಾವುಕ ಕ್ಷಣವೊಂದರ ವಿಡಿಯೋ ವೈರಲ್ ಆಗಿದೆ.
ಮಾಲ್‌ನಲ್ಲಿ ಅಭಿಮಾನಿಯೊಬ್ಬರು ಬಂದು ತಮ್ಮ ತೋಳಿನ ಮೇಲೆ ತಮನ್ನಾ ಭಾವಚಿತ್ರದ ಹಚ್ಚೆ ಹಾಕಿಸಿಕೊಂಡಿದ್ದಲ್ಲದೆ, ಲವ್ ಯೂ ತಮನ್ನಾ ಎಂದು ಬರೆಸಿಕೊಂಡಿದ್ದಾರೆ. ಆ ಟ್ಯಾಟೂ ನೋಡಿ ತಮನ್ನಾ ಭಾವುಕರಾದರು. ಅಭಿಮಾನಿ ತಮನ್ನಾ ಅವರ ಕಾಲಿಗೆ ನಮಸ್ಕರಿಸಿದ್ದರಿಂದ ಅವರಿಗೆ ಪ್ರೀತಿಯ ಅಪ್ಪುಗೆ ಕೊಟ್ಟರು.