ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ಪುರುಷರ ವಿಶ್ವಕಪ್ 2023 ವೇಳಾಪಟ್ಟಿ ಬಿಡುಗಡೆಯಾಗಿದೆ. ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಪಂದ್ಯಗಳು ನಡೆಯಲಿವೆ. ಭಾರತ ತಂಡ ಲೀಗ್ ಹಂತದಲ್ಲಿ ಒಟ್ಟು ಒಂಬತ್ತು ಪಂದ್ಯಗಳನ್ನು ಆಡಲಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8 ರಂದು ಆಡಲಿದ್ದು, ಚೆನ್ನೈನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ವಿಶ್ವ ಕ್ರಿಕೆಟ್ ಅಭಿಮಾನಿಗಳು ಉತ್ಸುಕರಾಗಿದ್ದು, ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಪಂದ್ಯ ಅಕ್ಟೋಬರ್ 15 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.
ಸೆಮಿಫೈನಲ್ ಪಂದ್ಯಗಳು ನವೆಂಬರ್ 15 ಮತ್ತು 16 ರಂದು ಮುಂಬೈ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿವೆ. 19ರಂದು ಅಹಮದಾಬಾದ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಭಾರತ ಪಂದ್ಯಗಳ ವಿವರ
ಅಕ್ಟೋಬರ್ 8: ಭಾರತ vs ಆಸ್ಟ್ರೇಲಿಯಾ
ಅಕ್ಟೋಬರ್ 11: ಭಾರತ vs ಅಫ್ಘಾನಿಸ್ತಾನ
ಅಕ್ಟೋಬರ್ 15: ಭಾರತ vs ಪಾಕಿಸ್ತಾನ
ಅಕ್ಟೋಬರ್ 19: ಭಾರತ vs ಬಾಂಗ್ಲಾದೇಶ
ಅಕ್ಟೋಬರ್ 22: ಭಾರತ vs ನ್ಯೂಜಿಲೆಂಡ್
ಅಕ್ಟೋಬರ್ 29: ಭಾರತ vs ಇಂಗ್ಲೆಂಡ್.
ನವೆಂಬರ್ 2: ಭಾರತ vs ಕ್ವಾಲಿಫೈಯರ್
ನವೆಂಬರ್ 5: ಭಾರತ vs ದಕ್ಷಿಣ ಆಫ್ರಿಕಾ
ನವೆಂಬರ್ 11: ಭಾರತ ವಿರುದ್ಧ ಕ್ವಾಲಿಫೈಯರ್