ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೊಮ್ಯಾಟೋ ಬೆಲೆ ಗಗನಕ್ಕೇರಿದೆ, ಟೊಮ್ಯಾಟೋ ಇಲ್ಲದೆ ಹೇಗಪ್ಪಾ ಅಡುಗೆ ಮಾಡೋದು ಅಂತ ಚಿಂತಿಸ್ತಿದ್ದೀರಾ ? ಯೋಚಿಸಬೇಡಿ ಟೊಮ್ಯಾಟೋ ಇಲ್ಲದೆಯೂ ಒಮ್ಮೆ ಮಾಡಿ ನೋಡಿ ಈ ರುಚಿಯಾದ ರಸಂ. ರಸಂ ಮಾಡಲು ಬೇಕಾಗುವ ಸಾಮಾಗ್ರಿಗಳು ಮತ್ತು ಮಾಡುವ ವಿಧಾನ ಇಲ್ಲಿ ತಿಳಿಯಿರಿ.
ಬೇಕಾಗುವ ಸಾಮಾಗ್ರಿಗಳು:
ಬೆಳ್ಳುಳ್ಳಿ
ಕಾಳುಮೆಣಸು
ಹುಣಸೇ ಹಣ್ಣು
ಉಪ್ಪು
ಅರಿಶಿನ
ಒಗ್ಗರಣೆಗೆ
ಸಾಸಿವೆ
ಜೀರಿಗೆ
ಒಣಮೆಣಸು
ಇಂಗು
ಕರಿಬೇವಿನ ಸೊಪ್ಪು
ಎಣ್ಣೆ ಅಥವಾ ತುಪ್ಪ
ಮಾಡುವ ವಿಧಾನ:
ಮೊದಲಿಗೆ ಬೇಕಾಗಿರುವಷ್ಟು ಹುಣಸೇ ಹಣ್ಣನ್ನ ತೆಗೆದುಕೊಂಡು ಒಂದು ಸಣ್ಣ ಪಾತ್ರೆಯಲ್ಲಿ ಬಿಸಿ ನೀರನ್ನು ಹಾಕಿ ಇಡಿ. ನಂತರ ಕಾಳು ಮೆಣಸು ಮತ್ತು ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಇಲ್ಲವೇ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ.
ನಂತರ ಒಂದು ಪಾತ್ರೆಗೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ. ಎಣ್ಣೆ ಕಾದ ಮೇಲೆ ಸಾಸಿವೆ ಹಾಕಿ ಸಿಡಿಸಿ, ನಂತರ ಜೀರಿಗೆ, ಒಣ ಮೆಣಸು, ಇಂಗು ಹಾಗೂ ಕರಿ ಬೇವಿನ ಎಲೆಗಳನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಿ.
ಬಳಿಕ ಮೊದಲೇ ತಯಾರಿಸಿಕೊಂಡಿರುವ ಕಾಳು ಮೆಣಸು ಮತ್ತು ಬೆಳ್ಳುಳ್ಳಿಯ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಚನ್ನಾಗಿ ಹುರಿಯಿರಿ. ಅದರ ಹಸಿ ವಾಸನೆ ಹೋದ ಮೇಲೆ ಅದಕ್ಕೆ ನೆನಸಿಟ್ಟ ಹುಣಸೇ ಹಣ್ಣಿನ ರಸವನ್ನು ಸೇರಿಸಿ ಅಗತ್ಯಕ್ಕೆ ತಕ್ಕಂತೆ ನೀರನ್ನು ಹಾಕಿ. ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಅರಿಶಿನ ಪುಡಿ ಹಾಕಿ ಚನ್ನಾಗಿ ಕುದಿಸಿದರೆ ರಸಂ ಸಿದ್ಧ.