ಒಂಟಿ ಸೆಕ್ಯುರಿಟಿ ಗಾರ್ಡ್ ಗಳೇ ಈತನ ಟಾರ್ಗೆಟ್: ಕೊನೆಗೂ ಸೈಕೋ ಕಿಲ್ಲರ್ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಧಾನಿಯಲ್ಲಿ ಒಂಟಿ ಸೆಕ್ಯುರಿಟಿ ಗಾರ್ಡ್​​ಗಳನ್ನು (Security Guard) ಹುಡುಕಿ ಕೊಲೆ ಮಾಡುತ್ತಿದ್ದ ಸೈಕೋ ಕಿಲ್ಲರ್​​ನನ್ನು (Psycho killer) ಕೊನೆಗೂ ಬಂಧಿಸಿದ್ದಾರೆ.

ತೌಸೀಪ್​​​ ಕೊಲೆ ಆರೋಪಿ. ಈತ ಮಧ್ಯರಾತ್ರಿ ಕಂಠಪೂರ್ತಿ ಕುಡಿದು, ಮಾದಕ ವಸ್ತುಗಳಿಂದ ನಶೆ ಏರಿಸಿಕೊಂಡು ಬರುವ ಈತ ನಸುಕಿನ ಜಾವ ಎರಡಿಂದ ಮೂರು ಗಂಟೆ ಅವಧಿಯಲ್ಲಿ ಒಂಟಿ ಸೆಕ್ಯುರಿಟಿ ಗಾರ್ಡ್​​ಗಳನ್ನು ಹುಡುಕಿ ಕೊಲ್ಲುತ್ತಿದ್ದನು.

ಈಗಾಗಲೇ ಆರ್​.ಟಿ ನಗರ, ಸಂಜಯ ನಗರ, ಜೆಸಿ ನಗರ, ಕೆಜಿ ಹಳ್ಳಿಯಲ್ಲಿ ಸೆಕ್ಯುರಿಟಿ ಗಾರ್ಡ್​​​ಗಳನ್ನು ಕೊಲೆ ಮಾಡಿದ್ದಾನೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಮನೆ ಬಳಿಯೂ ಸೆಕ್ಯುರಿಟಿಗೆ ಚಾಕುವಿನಿಂದ ಇರಿದಿದ್ದನು.

​​ಹಲವು ಪೊಲೀಸ್​ ಠಾಣೆಗಳಲ್ಲಿ ಈತನ ವಿರುದ್ಧ ದೂರು ದಾಖಲಾಗಿದ್ದವು. ಈ ಹಿನ್ನೆಲೆ ಮೂರು ದಿನಗಳ ಕಾಲ ಹಗಲು ರಾತ್ರಿ ಪೊಲೀಸರು ಈತನ ಹಿಂದೆ ಬಿದ್ದಿದ್ದರು. ಕೊನೆಗೆ ಆರ್​.ಟಿ ನಗರ 80 FT ರೋಡ್​​ ಬಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!