ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ನಡುವೆ ಘರ್ಷಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಾಜೆಕ್ಟ್ ಚೀತಾದ ಭಾಗವಾಗಿ, ನಮೀಬಿಯಾ ಮತ್ತು ಆಫ್ರಿಕಾದಿಂದ ತರಲಾದ 20 ಚಿರತೆಗಳನ್ನು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಅದರಲ್ಲಿ ಈಗಾಗಲೇ ಕೆಲವು ಚಿರತೆಗಳು ಸಾವನ್ನಪ್ಪಿದ್ದು, ಇದೀಗ ಕೆಲವು ಕಾದಾಟಕ್ಕಿಳಿದಿವೆ.

ನಮೀಬಿಯಾದಿಂದ ಕರೆತಂದ ಗೌರವ್ ಮತ್ತು ಶೌರ್ಯ ಮತ್ತು ದಕ್ಷಿಣ ಆಫ್ರಿಕಾದಿಂದ ತಂದ ಅಗ್ನಿ ಮತ್ತು ವಾಯು ಚಿರತೆಗಳು ಕಾದಾಟ ನಡೆಸಿವೆ. ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಉದ್ಯಾನವನದ ಮುಕ್ತ ಪ್ರದೇಶದಲ್ಲಿ ನಾಲ್ಕು ಚೀತಾಗಳು ಪರಸ್ಪರ ಮುಖಾಮುಖಿಯಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೀತಾಗಳ ನಡುವಿನ ಸಂಘರ್ಷವನ್ನು ಗಮನಿಸಿದ ಅಧಿಕಾರಿಗಳು ಅವುಗಳನ್ನು ಚದುರಿಸಲು ದೊಡ್ಡ ಸೈರನ್‌ಗಳನ್ನು ಬಾರಿಸಿದರು.

ಈ ಕಾದಾಟದಲ್ಲಿ ಚಿರತೆಯೊಂದು ಗಂಭೀರವಾಗಿ ಗಾಯಗೊಂಡಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಗಾಯಗೊಂಡಿರುವ ಚೀತಾ ಅಗ್ನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆತನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಚೀತಾಗಳ ನಡುವೆ ಇಂತಹ ಕಾದಾಟಗಳು ಸಹಜ ಎಂದು ವಿಭಾಗೀಯ ಅರಣ್ಯಾಧಿಕಾರಿ ಪಿ.ಕೆ.ವರ್ಮಾ ತಿಳಿಸಿದ್ದಾರೆ.

ಇದೇ ವೇಳೆ ದೇಶದಲ್ಲಿ ಅಳಿವಿನಂಚಿನಲ್ಲಿರುವ ಚೀತಾಗಳ ಪುನಶ್ಚೇತನ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯಿಂದ ಕೈಗೊಂಡಿದೆ. ಇದರ ಭಾಗವಾಗಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಆಫ್ರಿಕಾದ ನಮೀಬಿಯಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ 8 ಚೀತಾಗಳನ್ನು ತರಲಾಗಿತ್ತು. ಎರಡನೇ ಹಂತದಲ್ಲಿ, ಈ ವರ್ಷ ಫೆಬ್ರವರಿ 18 ರಂದು ದಕ್ಷಿಣ ಆಫ್ರಿಕಾದಿಂದ ಒಟ್ಟು 12 ಚೀತಾಗಳನ್ನು ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು. ಆ 20 ಚೀತಾಗಳ ಪೈಕಿ ಈ ವರ್ಷದ ಮಾರ್ಚ್‌ನಿಂದ ಒಟ್ಟು ಆರು ಚೀತಾಗಳನ್ನು ಸಾವನ್ನಪ್ಪಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!