ವರ್ಸೋವಾ-ಬಾಂದ್ರಾ ಸೀ ಲಿಂಕ್ ಗೆ ವೀರ್ ಸಾವರ್ಕರ್ ಸೇತು ಎಂದು ಮರುನಾಮಕರಣ ಮಾಡಿದ ಮಹಾ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮುಂಬಯಿಯ ವರ್ಸೋವಾ-ಬಾಂದ್ರಾ ಸಮುದ್ರ ಸಂಪರ್ಕ ಸೇತುವೆಗೆ ವೀರ ಸಾವರ್ಕರ್​ ಸೇತು ಎಂದು ಮರುನಾಮಕರಣ ಮಾಡಲಾಗಿದೆ. ಇಂದು ಮಹಾರಾಷ್ಟ್ರ ಸರ್ಕಾರದ ಸಂಪುಟ ಸಭೆ ನಡೆದಿದ್ದು, ಈ ಸಭೆಯಲ್ಲಿ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ವರ್ಸೋವಾ-ಬಾಂದ್ರಾ ಸೀ ಲಿಂಕ್​​ಗೆ ವೀರ ಸಾವರ್ಕರ್ ಹೆಸರು ಇಡುವುದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಈ ಮುಂಚೆ ಘೋಷಿಸಿದ್ದರು. ಅದರಂತೆಯೇ ಈಗ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ಇದರ ಜೊತೆಗೆ ಮುಂಬಯಿ ಟ್ರಾನ್ಸ್ ಹಾರ್ಬರ್ (ಸೆವ್ರಿ-ನ್ಹಾವಾ ಶೆವಾ ಟ್ರಾನ್ಸ್ ಹಾರ್ಬರ್ ಲಿಂಕ್) ಲಿಂಕ್​​ಗೆ ಅಟಲ್​ ಬಿಹಾರಿ ವಾಜಪೇಯಿ ಸ್ಮೃತಿ ನ್ಹವಾ ಶೇವಾ ಅಟಲ್​ ಸೇತು ಎಂದೂ ನಾಮಕರಣ ಮಾಡಲಾಗಿದೆ.

ಮುಂಬಯಿಯ ವರ್ಸೋವಾದಿಂದ ಬಾಂದ್ರಾವರೆಗೆ ಸಮುದ್ರ ಮಾರ್ಗದಲ್ಲಿ ಸಂಪರ್ಕಿಸುವ ಈ ಸೇತುವೆ ಇನ್ನೂ ನಿರ್ಮಾಣ ಹಂತದಲ್ಲಿದೆ. ಸುಮಾರು 17.17 ಕಿಮೀ ಉದ್ದದ ಸೇತುವೆ ಇದಾಗಿದೆ. 8 ಪಥದ ಈ ಸಮುದ್ರ ಸಂಪರ್ಕ ಸೇತುವೆಯಿಂದ ಮುಂಬಯಿಯ ಪಶ್ಚಿಮ ಎಕ್ಸ್​ಪ್ರೆಸ್​ ಹೈವೇ ಮತ್ತು ಪೂರ್ವದಲ್ಲಿರುವ ಮುಂಬಯಿ ಸಬ್​ಅರ್ಬನ್​ ರೈಲ್ವೆ ಮಾರ್ಗದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!