ಕನ್ನಡಪರ ಸಂಘಟನೆ, ರೈತರ ಮೇಲಿನ ಕೇಸ್ ವಾಪಾಸ್: ಸಿದ್ದರಾಮಯ್ಯ ಸರಕಾರದ ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕನ್ನಡಪರ ಸಂಘಟನೆ, ರೈತರು ಹಾಗೂ ಹೋರಾಟಗಾರರ ಮೇಲಿನ ವಿಚಾರಣೆ ಹಂತದಲ್ಲಿರುವ ಕೇಸ್​​ಗಳನ್ನು​ ಹಿಂಪಡೆಯಲು ನಿರ್ಧರಿಸಿದೆ

ಈ ಕುರಿತು ಮಾಹಿತಿ ನೀಡಿದ ಕಾನೂನು ಸಚಿವ ಹೆಚ್​ಕೆ ಪಾಟೀಲ್​, ಕೇಸ್​​ಗಳನ್ನು ಹಿಂಪಡೆಯಲು ಸಂಪುಟ ಉಪಸಮಿತಿ ರಚನೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಕೃಷ್ಣ, ಕಾವೇರಿ ಸೇರಿದಂತೆ ವಿವಿಧ ನೀರಾವರಿ ವಿವಿಧ ನೀರಾವರಿ ನ್ಯಾಯಾಧಿಕರಣ ಕಾನೂನು ವಿಷಯಗಳ ಅನುಷ್ಠಾನ, ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸಂಪುಟ ಉಪಸಮಿತಿ ರಚನೆ ಮಾಡಲಾಗುವುದು. ಆನೇಕಲ್, ಚಂದಾಪುರ ಒಳಚರಂಡಿ ಕಾಮಗಾರಿಗೆ 106 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಪಾಟೀಲ್ ತಿಳಿಸಿದರು.

ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಕೌನ್ಸಿಲ್​ನಿಂದ ಕೆಲವು ತಿದ್ದುಪಡಿಗೆ ಸೂಚಿಸಲಾಗಿದೆ. ಅವುಗಳಲ್ಲಿ 2 ತಿದ್ದುಪಡಿಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ ಎಂದು ಪಾಟೀಲ್ ತಿಳಿಸಿದರು. ಸರಕು ಮತ್ತು ಸೇವಾ ತೆರಿಗೆ ಪದ್ಧತಿಯ ಕೆಲವು ತಿದ್ದುಪಡಿಗೆ ಮಾತ್ರ ಒಪ್ಪಿಗೆ ಸೂಚಿಸಲಾಗಿದೆ. ಉಳಿದವು ಜಿಎಸ್​​ಟಿ ಕೌನ್ಸಿಲ್​ನಲ್ಲಿ ಮರು ಪ್ರಸ್ತಾಪ ಆಗಿ ಚರ್ಚೆಗೆ ಬರಲಿವೆ. ಈ ಬಗ್ಗೆ ಮುಂಬರುವ ಅಧಿವೇಶನದಲ್ಲೂ ಪ್ರಸ್ತಾಪ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!