ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಟೊಮೆಟೊ ದರ ಹೆಚ್ಚುತ್ತಿದ್ದು, ಈ ನಡುವೆ ಹೆಚ್ಚುತ್ತಿರುವ ಬೆಲೆಯನ್ನು ನಿಯಂತ್ರಿಸುವುದಕ್ಕಾಗಿ ತಮಿಳುನಾಡಿನಾದ್ಯಂತ ರಾಜ್ಯ ಸರ್ಕಾರ ಫಾರ್ಮ್ ಫ್ರೆಶ್ ಔಟ್ಲೆಟ್ಗಳಲ್ಲಿ (FFO) ಟೊಮೆಟೊ (tomatoes) ಮಾರಾಟ ಮಾಡಲು ಕ್ರಮ ಕೈಗೊಂಡಿದೆ.
ಟೊಮೆಟೊವನ್ನು ಎಫ್ಎಫ್ಒಗಳಲ್ಲಿ ಕೆಜಿಗೆ 60 ರೂ.ಗೆ ಮಾರಾಟ ಮಾಡಲಾಗುವುದು. ತಮಿಳುನಾಡಿನಲ್ಲಿ ಸಾಮಾನ್ಯ ಖರೀದಿಗಿಂತ ಶೇ.15ರಷ್ಟು ಹೆಚ್ಚು ಟೊಮೆಟೊ ಖರೀದಿಸಲಾಗಿದೆ ಎಂದು ತಮಿಳುನಾಡಿನ ಸಹಕಾರ, ಆಹಾರ ಮತ್ತು ಗ್ರಾಹಕ ರಕ್ಷಣಾ ಇಲಾಖೆ ಸಚಿವ ಪೆರಿಯಕರುಪ್ಪನ್ ಹೇಳಿದ್ದಾರೆ. ಈ ಮೂಲಕ ತಮಿಳುನಾಡಿನ 62 ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಟೊಮೆಟೊ ಮಾರಾಟವಾಗಲಿದೆ.
ಇನ್ನು ಎಲ್ಲಾ ತರಕಾರಿಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲುಸ್ಟಾಲಿನ್ ಸರಕಾರ ಪ್ರಯತ್ನಿಸುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಹೊರರಾಜ್ಯಗಳಿಂದ ಟೊಮೆಟೊ ಖರೀದಿಗೆ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ. ಇನ್ನು 3ರಿಂದ 4 ದಿನಗಳಲ್ಲಿ ಟೊಮೆಟೊ ಬೆಲೆ ಸಂಪೂರ್ಣ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.