ಹೊಸದಿಗಂತ ವರದಿ,ಮೈಸೂರು:
ಮೈಸೂರು ರೈಲ್ವೆ ನಿಲ್ದಾಣವನ್ನು ವಿಸ್ತರಿಸುವ 346.64 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಬುಧವಾರ ಮೈಸೂರಿನ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಗತಿಶಕ್ತಿ ವಿಭಾಗ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ರೈಲ್ವೆ ಇಲಾಖೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಭೆ ನಡೆಸಿ ಮಾತನಾಡಿದ ಅವರು, ಸೆಪ್ಟಂಬರ್ ತಿಂಗಳಲ್ಲಿ 750 ಕೋಟಿ ರೂ.ವೆಚ್ಚದಲ್ಲಿ ಹೆಚ್ಚುವರಿ ಟಿಕೆಟ್ ಕೌಂಟರ್ ಸೇರಿ ಇನ್ನಿತರ ಕಾಮಗಾರಿ ಆರಂಭವಾಗಲಿದೆ. ಈಗಾಗಲೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಆ. 30 ಕ್ಕೆ ಟೆಕ್ನಿಕಲ್ ಬಿಡ್ ಆಗುತ್ತದೆ. ನವೆಂಬರ್ ತಿಂಗಳೊಳಗೆ ಕಾಮಗಾರಿ ಆರಂಭಿಸಲಾಗುತ್ತದೆ. ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ರೈಲು ನಿಲ್ದಾಣದಲ್ಲಿ ಆರು ಪ್ಲಾಟ್‌ಫಾರಂ ಜತೆಗೆ ಹೆಚ್ಚುವರಿಯಾಗಿ ಮೂರು ಪ್ಲಾಟ್‌ಫಾರಂ,ನಾಲ್ಕು ಫಿಟ್‌ಲೈನ್, ನಾಲ್ಕು ಸಬ್‌ಲೇನ್ ನಿರ್ಮಾಣವಾಗಲಿವೆ ಎಂದರು.
ಬೈಯಪ್ಪನಹಳ್ಳಿ ಮಾದರಿ ದ್ವಾರ : ಬೆಂಗಳೂರಿನ ಬೈಯಪ್ಪನಹಳ್ಳಿ, ಯಂಶವoತಪುರ ಟರ್ಮಿನಲ್ ಮಾದರಿಯಲ್ಲಿ ಮೈಸೂರಿನ ಸಿಎಫ್‌ಟಿಆರ್‌ಐ ಕಡೆಗಿನ ರೈಲ್ವೆ ನಿಲ್ದಾಣದ 3 ನೇ ಪ್ರವೇಶ ದ್ವಾರ ನಿರ್ಮಿಸಲು ಚರ್ಚಿಸಲಾಗುತ್ತಿದೆ. ಮುಂದಿನ 2 ತಿಂಗಳಲ್ಲಿ ಡಿಪಿಆರ್ ಸಿದ್ದಪಡಿಸಲಾಗುವುದು. ಇದಕ್ಕೆ ಹೆಚ್ಚುವರಿಯಾಗಿ 200 ಕೋಟಿ ರೂ. ಖರ್ಚಾಗಲಿದೆ. 16ರಿಂದ 20 ಕೊಠಡಿ ಇರುವ ಒಂದು ಫ್ಲಾಜಾ, ಸೂಪರ್ ಮಾರ್ಕೆಟ್, ಹೋಟೆಲ್ ಮೊದಲಾದ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಕೆಆರ್‌ಎಸ್ ರಸ್ತೆಯ ಬಳಿ ರೈಲ್ವೆ ಓವರ್ ಬ್ರಿಡ್ಜ್ ವಾಡುವ ವಿನ್ಯಾಸವು ಅನುಮೋದನೆ ಹಂತದಲ್ಲಿದೆ. ಕ್ರಾಫರ್ಡ್ಹಾಲ್ ಪಕ್ಕದಲ್ಲಿರುವ ರೈಲ್ವೆ ಹಳಿ ಬಳಿಯಲ್ಲಿ ಶೀಘ್ರವೇ ಅಂಡರ್ ಪಾಸ್ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದರು ತಿಳಿಸಿದರು.
1870 ರಲ್ಲಿ ಮೈಸೂರಿನ ಮಹಾರಾಜರಾಗಿದ್ದ ಚಾಮರಾಜ ಒಡೆಯರ್ ಅವರು, ಕರ್ನಾಟಕಕ್ಕೆ ರೈಲ್ವೆ ಟ್ರಾ÷್ಯಕ್ ತಂದರು. ಹೀಗಾಗಿ ರೈಲ್ವೆ ನಿಲ್ದಾಣದ 3 ನೇ ಪ್ರವೇಶದ್ವಾರದಲ್ಲಿ ಚಾಮರಾಜ ಒಡೆಯರ್ ಅವರ ಪ್ರತಿಮೆ ನಿರ್ವಾಣ ವಾಡಲಾಗುವುದು. ಅಲ್ಲದೇ ಮೈಸೂರು ರೈಲ್ವೆ ನಿಲ್ದಾಣಕ್ಕೆ ಚಾಮರಾಜ ಒಡೆಯರ್ ಅವರ ಹೆಸರಿಡಲು ಕ್ರಮವಹಿಸಲಾಗುತ್ತದೆ ಎಂದರು.
ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಕೆಲವು ರೈಲುಗಳು ಕೆಂಗೇರಿ ತಲುಪಲು ತಡವಾಗುತ್ತಿದೆ. 2 ಗಂಟೆಯೊಳಗೆ ಕೆಂಗೇರಿ ತಲುಪುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮೈಸೂರಿಗೆ ತಂದಿರುವ ಚೆನ್ನೈ ಸೂಪರ್ ಫಾಸ್ಟ್ಗೆ ನಂದಿ ಎಕ್ಸ್ಪ್ರೆಸ್ ಎಂದು ಹೆಸರಿಸಲಾಗುವುದು ಎಂದು ವಿವರಿಸಿದರು. ಮೈಸೂರು-ಬೆಂಗಳೂರು ನಡುವೆ ವಾಸ್ ರ‍್ಯಾಪಿಡ್ ಟ್ರಾನ್ಸ್ಪೋರ್ಟೇಷನ್ ಸಿಸ್ಟಂ ಜಾರಿಗೆ ತರಲು ಚಿಂತಿಸಲಾಗುತ್ತಿದೆ. 3 ಎಲೆಕ್ಟ್ರಿಕ್ ಟ್ರೈನ್ ತರಲು ಪ್ರಯತ್ನಿಸಲಾಗುತ್ತಿದೆ. ಮುಂಬಯಿ-ಬೆoಗಳೂರು ನಡುವೆ ಸಂಚರಿಸುವ ಉದ್ಯಾನ್ ಎಕ್ಸ್ಪ್ರೆಸ್ ರೈಲನ್ನು ಮೈಸೂರಿಗೆ ತರಲು ಪ್ರಯತ್ನಿಸಲಾಗುವುದು. ಮೈಸೂರು ವಾರಣಾಸಿ ಸೂಪರ್ ಫಾಸ್ಟ್ ರೈಲು ವಾರದಲ್ಲಿ ನಾಲ್ಕು ದಿನ ಬಳಕೆಯಾಗದೇ ಇರುತ್ತದೆ. ಅದನ್ನು ರಾಮೇಶ್ವರಕ್ಕೆ ವಾರದ ರೈಲುಗಾಡಿಯಾಗಿ ಪರಿಚಯಿಸಲು ಚಿಂತಿಸಲಾಗುತ್ತಿದೆ ಎಂದರು. 26 ಎಕರೆ ಜಾಗದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸರಕಾರ ಕ್ಯಾಬಿನೆಟ್ ಅನುಮತಿ ನೀಡಿದರೆ, ಕೆಎಸ್‌ಸಿಎ 100 ಕೊಟಿ ರೂ. ವಿನಿಯೋಗಿಸಲು ಸಿದ್ದವಿದೆ. ಅಭಿವೃದ್ಧಿ ವಿಚಾರದಲ್ಲಿ ಎಲ್ಲಾ ಪಾರ್ಟಿಯವರು ಕೈ ಜೋಡಿಸಬೇಕಿದೆ. ರಾಜ್ಯಸರ್ಕಾರ ಉಪಕಾರ ಮಾಡದಿದ್ದರೂ ಉಪದ್ರ ನೀಡದಿದ್ದರೆ ಸಾಕು ಎಂದರು.
ಮೈಸೂರು-ಚಾಮರಾಜ ನಗರ ನಡುವಿನ ವಿದ್ಯುತೀಕರಣ ಕಾಮಗಾರಿ ಕೈಗೊಳ್ಳುವಲ್ಲಿ ಉಂಟಾಗಿರುವ ಸಮಸ್ಯೆ ಬಗೆಹರಿಸಲು ಮೈಸೂರು ವಿವಾನ ನಿಲ್ದಾಣದ ಬಳಿ 1.50 ಕಿ.ಮೀ. ತಿರುವು ಪಡೆದು ಪ್ರತ್ಯೇಕ ಟ್ರಾ÷್ಯಕ್ ನಿರ್ಮಿಸಲು ಚಿಂತಿಸಲಾಗುತ್ತಿದೆ. ಇಲ್ಲದಿದ್ದಲ್ಲಿ ಕೋಟ್ಯಾಂತರ ರೂ. ವಿನಿಯೋಗಿಸಿ ಕೈಗೊಂಡ ಈ ಯೋಜನೆ ವ್ಯರ್ಥವಾಗುತ್ತದೆ ಎಂದರು. ಸಭೆಯಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್‌ವಾಲ್, ಗತಿಶಕ್ತಿ ಯೋಜನೆ ಉಸ್ತುವಾರಿ ವಿಷ್ಣುದಾಸ್ ಇನ್ನಿತರರು ಹಾಜರಿದ್ದರು.