ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ್ದು, ಒಂದು ಟನ್ ಕಬ್ಬಿಗೆ 100 ರೂಪಾಯಿ ನ್ಯಾಯೋಚಿತ ಮತ್ತು ಲಾಭದಾಯದ ಎಫ್ ಆರ್ ಪಿ (FRP) ಬೆಲೆ ಹೆಚ್ಚಳ ಮಾಡಿದೆ.
ಎಫ್ ಆರ್ ಪಿ ಬೆಲೆ ಹೆಚ್ಚಳ ಮಾಡುವಂತೆ ಹಲವು ದಿನಗಳಿಂದ ದೇಶಾದ್ಯಂತ ರೈತರು ಒತ್ತಡ ಹೇರುತ್ತಿದ್ದರು. ಇದೀಗ ಕೇಂದ್ರ ಸರ್ಕಾರ 100 ರೂ ಎಫ್ ಆರ್ ಪಿ (FRP) ದರ ಹೆಚ್ಚಳ ಮಾಡಿದೆ.
ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜು ಮಾಡುವ ಪ್ರತಿ ಟನ್ ಕಬ್ಬಿಗೆ 3,150 ಎಫ್ ಆರ್ ಪಿ ನಿಗದಿ ಮಾಡಲಾಗಿದೆ. ಪ್ರತಿ ಕ್ವಿಂಟಲ್ ಕಬ್ಬಿಗೆ 315 ರೂಪಾಯಿ ಸಿಗಲಿದೆ.