ಸತತ ನೂರು ಟೆಸ್ಟ್​ ಪಂದ್ಯ: ವಿಶ್ವ ದಾಖಲೆ ಬರೆದ ಆಸೀಸ್ ಬೌಲರ್​ ನಥಾನ್​ ಲಿಯೋನ್​!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಯಶಸ್​ ಸರಣಿಯ(Ashes 2023) ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ ಕಣಕ್ಕಿಳಿಯುವ ಮೂಲಕ ಆಸ್ಟ್ರೇಲಿಯಾ ತಂಡದ ಸ್ಪಿನ್​ ಬೌಲರ್​ ನಥಾನ್​ ಲಿಯೋನ್​(Nathan Lyon) ಅವರು ವಿಶ್ವ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ಸತತವಾಗಿ ನೂರು ಟೆಸ್ಟ್​ ಪಂದ್ಯ ಆಡಿದ ವಿಶ್ವದ 6ನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಏಕೈಕ ಬೌಲರ್​​ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.​

2011ರಲ್ಲಿ ಶ್ರೀಲಂಕಾ ವಿರುದ್ಧ ಪದಾರ್ಪಣೆ ಮಾಡಿದ 35 ವರ್ಷದ ಲಿಯೋನ್​ ಇದುವರೆಗೆ ಆಸೀಸ್​ ಪರ 121 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 30.99ರ ಸರಾಸರಿಯಲ್ಲಿ 495* ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದಲ್ಲಿ ಶೇನ್ ವಾರ್ನ್ (708 ವಿಕೆಟ್) ಮತ್ತು ಗ್ಲೆನ್ ಮೆಕ್‌ಗ್ರಾತ್ (563 ವಿಕೆಟ್) ಬಳಿಕ ಅತ್ಯಧಿಕ ವಿಕೆಟ್​ ಪಡೆದ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

ಸತತ ನೂರು ಟೆಸ್ಟ್‌ ಪಂದ್ಯಗಳನ್ನು ಆಡಿರುವ ಆಟಗಾರರ ಪಟ್ಟಿ

ಅಲೆಸ್ಟಾರ್ ಕುಕ್- 159 ಪಂದ್ಯ

ಅಲನ್ ಬಾರ್ಡರ್- 153 ಪಂದ್ಯ

ಮಾರ್ಕ್ ವಾ-107 ಪಂದ್ಯ

ಸುನಿಲ್ ಗವಾಸ್ಕರ್-106 ಪಂದ್ಯ

ಬ್ರೆಂಡನ್ ಮೆಕಲಮ್-101 ಪಂದ್ಯ

ನಾಥನ್ ಲಿಯೋನ್​-100 ಪಂದ್ಯ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!