ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋವಾದಲ್ಲಿ ಮುಂಗಾರು ಆರಂಭವಾಗಿದ್ದು, ಬೀಚ್‌ಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಆದರೆ ಪ್ರವಾಸಿಗರ ಬರುವಿಕೆಯ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.
ಗೋವಾದಲ್ಲಿ ಜಲಕ್ರೀಡೆಗಳಿಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ, ಆದರೂ ಪ್ರವಾಸಿಗರು ಭೇಟಿ ನೀಡುವುದನ್ನು ಮುಂದುವರಿಸಿದ್ದಾರೆ. ಆದರೆ ಪ್ರವಾಸಿಗರ ಸಂಖ್ಯೆ ಮೊದಲಿಗಿಂತ ಕಡಿಮೆಯಾಗಿದೆ. ಶೇ.೨೦ರಷ್ಟು ಪ್ರವಾಸಿಗರು ಮಳೆಗಾಲದಲ್ಲಿ ಗೋವಾಗೆ ಆಗಮಿಸುತ್ತಾರೆ. ಜನದಟ್ಟಣೆಯನ್ನು ತಪ್ಪಿಸೋದಕ್ಕೆ ಮಳೆಗಾಲದಲ್ಲಿ ಗೋವಾ ಟ್ರಿಪ್‌ಗೆ ಬರುತ್ತಾರೆ. ವಸ್ತುಗಳ ಬೆಲೆಯೂ ಕಡಿಮೆ ಇರುತ್ತದೆ ಎನ್ನುವುದು ಪ್ರವಾಸಿಗರ ಅಭಿಪ್ರಾಯ.
ಸಮುದ್ರ ತೀರದಲ್ಲಿ ಯಾವುದೇ ರೀತಿಯ ಚಟುವಟಿಕೆ ನಡೆಯುತ್ತಿಲ್ಲ, ಎತ್ತರದಲ್ಲಿ ಅಲೆಗಳು ಇರುವ ಕಾರಣ ಸಮುದ್ರದಲ್ಲಿ ಈಜದಂತೆ ಸಲಹೆ ನೀಡಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಖಾಸಗಿ ಜೀವರಕ್ಷಕ ಸಂಸ್ಥೆ ತನ್ನ ಸಿಬ್ಬಂದಿಗಳನ್ನು ಪೂರ್ಣವಾಗಿ ಬೀಚ್‌ಗಳಿ ಬಳಿ ನಿಯೋಜಿಸಿದೆ.
ಈ ಸಮಯದಲ್ಲಿ ಗೋವಾಕ್ಕೆ ಬಂದರೆ, ಮಾಲಿನ್ಯವಿಲ್ಲ, ಜನದಟ್ಟಣೆಯಿಲ್ಲ, ದುಬಾರಿಯಿಲ್ಲ, ಗೋವಾದ ಪ್ರಕೃತಿಯನ್ನು ಸವಿಯೋದಕ್ಕೆ ಇದೇ ಸರಿಯಾದ ಕಾಲ ಎಂದು ಪ್ರವಾಸಿಗರು ಅಭಿಪ್ರಾಯ ಪಟ್ಟಿದ್ದಾರೆ.