ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಚಿತ್ರೀಕರಣದ ನಡುವೆಯೂ ಸ್ನೇಹಿತರ ಜೊತೆ ರಶ್ಮಿಕಾ ಸಮಯ ಕಳೆಯುತ್ತಿದ್ದು, ಊಟದ ಬಗ್ಗೆ ಒಂದು ಪ್ರಶ್ನೆಯನ್ನು ಅಭಿಮಾನಿಗಳಿಗಿಟ್ಟಿದ್ದಾರೆ.
ನಾನು ಚೀಟ್ ಡೇಗಳಲ್ಲಿ ಮೊದಲು ಡೆಸರ್ಟ್ ಆರ್ಡರ್ ಮಾಡ್ತೀನಿ, ತದನಂತರ ಊಟ ಆರ್ಡರ್ ಮಾಡ್ತೀನಿ, ಊಟಕ್ಕೂ ಮುಂಚೆ ಡೆಸರ್ಟ್ ತಿನ್ನೋದು ವಿಚಿತ್ರ ಅಭ್ಯಾಸ ಅಂತ ನನ್ನ ಫ್ರೆಂಡ್ಸ್ ಹೇಳ್ತಾರೆ, ಇದು ನಿಜಾನಾ? ನಿಮ್ಯಾರಿಗೂ ಊಟಕ್ಕೂ ಮುನ್ನ ಸ್ವೀಟ್ ತಿನ್ನೋ ಅಭ್ಯಾಸ ಇಲ್ವಾ? ಎಂದು ಪ್ರಶ್ನಿಸಿದ್ದಾರೆ.