ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ನವಾಜುದ್ದೀನ್ ಸಿದ್ದಿಕಿ ಮಾಜಿ ಪತ್ನಿ ಬಿಗ್ಬಾಸ್ನಿಂದ ಎರಡೇ ವಾರಕ್ಕೆ ಹೊರಬಂದಿದ್ದಾರೆ.
ಇದೀಗ ಹೊರಗೆ ಬಂದ ನಂತರ ಸಲ್ಮಾನ್ ಖಾನ್ ನನ್ನನ್ನು ಬೇಕಂತಲೇ ಕರೆಸಿದ್ದಾರೆ, ಜನರಿಗೆ ನಾನು ಇಷ್ಟ ಆಗಿದ್ದೆ, ಆದರೆ ನನ್ನನ್ನು ಬೇಕಂತಲೇ ಬಿಗ್ಬಾಸ್ನಿಂದ ಸಲ್ಮಾನ್ ಹೊರಕರೆಸಿದ್ದಾರೆ ಎಂದು ಆಲಿಯಾ ಆರೋಪಿಸಿದ್ದಾರೆ.
ನವಾಜ್ ಬಗ್ಗೆ ಮನೆಯಲ್ಲಿ ಮಾತನಾಡಲು ಶುರು ಮಾಡಿದ್ದೆ, ಅವರು ನನಗೆ ಏನೆಲ್ಲಾ ಮಾಡಿದ್ದಾರೆ ಎನ್ನುವ ಬಗ್ಗೆ ಸ್ನೇಹಿತರಿಗೆ ಹೇಳುತ್ತಿದ್ದೆ. ಗೆಳೆಯನ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಸಲ್ಮಾನ್ ನನ್ನನ್ನು ಹೊರಕರಿಸಿದ್ದಾರೆ. ಆದರೆ ಇದು ಶೋ ಎಥಿಕ್ಸ್ ಅಲ್ಲ ಎಂದು ಹೇಳಿದ್ದಾರೆ.