ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದೇಶಿಗರು, ಹಾವು, ಜಿರಳೆ, ಹಲ್ಲಿ ತಿನ್ನೋದನ್ನು ನೋಡಿದ್ದೇವೆ, ಆದರೆ ಇದೀಗ ಮೊಸಳೆಯ ಕಾಲಿನ ಸೂಪ್ ಎಲ್ಲೆಡೆ ವೈರಲ್ ಆಗ್ತಿದೆ.
ತೈವಾನೀಸ್ ರೆಸ್ಟೋರೆಂಟ್‌ನಲ್ಲಿ ಮೊಸಳೆ ಕಾಲ್ ಸೂಪ್ ತಯಾರಾಗುತ್ತದೆ. ಇದಕ್ಕೆ ಗಾಡ್ಝಿಲ್ಲಾ ರಾಮೆನ್ ಎಂದು ಹೆಸರಿಡಲಾಗಿದೆ. ಅಕ್ಷರಶಃ ಮೊಸಳೆ ಕಾಲನ್ನು ಸೂಪ್‌ಬೌಲ್‌ನಲ್ಲಿ ಕಾಣಬಹುದಾಗಿದೆ. ಎಲ್ಲರೂ ಇದನ್ನು ಎಂಜಾಯ್ ಮಾಡುತ್ತಾ ತಿನ್ನುತ್ತಿದ್ದು, ವೆಜ್ ಪ್ರಿಯರಿಗೆ ವಾಕರಿಕೆ ಬರುತ್ತಿದೆ.
ಅಂದಹಾಗೆ ಈ ಸೂಪ್ ಬೆಲೆ ಬರೋಬ್ಬರಿ ನಾಲ್ಕು ಸಾವಿರ ರೂಪಾಯಿ. ರೆಸ್ಟೋರೆಂಟ್‌ಗೆ ಹೋದ ತಕ್ಷಣ ಈ ಸೂಪ್ ಸಿಗೋದಿಲ್ಲ.ಇದನ್ನು ತಿಂಗಳುಗಳ ಮುನ್ನವೇ ಬುಕ್ ಮಾಡಿರಬೇಕಿದೆ. ಸದ್ಯ ಇದೇ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರಬಿಂದುವಾಗಿದ್ದು, ಮೊಸಳೆ ಕಾಲುತಿನ್ನುವ ಸಾಕಷ್ಟು ವಿಡಿಯೋಗಳು ಲಭ್ಯವಿದೆ.