- ತರಕಾರಿ ತೊಳೆದು ಹೆಚ್ಚಿ, ಹೆಚ್ಚಿದ ಮೇಲೆ ತೊಳೆಯಬೇಡಿ
- ತರಕಾರಿ ಸಿಪ್ಪೆಗಳನ್ನು ಸಣ್ಣದಾಗಿ ತೆಗೆಯಿರಿ, ಸಂಪೂರ್ಣ ಸಿಪ್ಪೆ ತೆಗೆದುಹಾಕಿದರೆ ಮಿನರಲ್ಸ್, ವಿಟಮಿನ್ಸ್ ಸಿಗುವುದಿಲ್ಲ.
- ಆಲೂಗಡ್ಡೆ ಹಾಗೂ ಬದನೆಕಾಯಿ ಕತ್ತರಿಸಿದ ನಂತರ ನೀರಿನಲ್ಲಿ ಇಡಿ, ಬಣ್ಣ ಬದಲಾಗುವುದಿಲ್ಲ.
- ತರಕಾರಿ ಬೇಯಿಸಿದ ನೀರನ್ನು ಬೇರೆ ಯಾವುದಾದರೂ ಅಡುಗೆಗೆ ಬಳಸಿ ಅದನ್ನು ಎಸೆಯಬೇಡಿ
- ಸೇಬು ಕಪ್ಪಾಗದಿರಲಿ ನಿಂಬೆರಸ ಅಥವಾ ಉಪ್ಪು ಹಚ್ಚಿ ಇಡಿ
- ಮಸ್ಲಿನ್ ಬಟ್ಟೆಯಲ್ಲಿ ಕೊತ್ತಂಬರಿ ಇಟ್ಟರೆ ಹೆಚ್ಚು ದಿನ ಫ್ರೆಶ್ ಆಗಿರುತ್ತದೆ.
- ಹಸಿಮೆಣಸಿನಕಾಯಿ ತೊಟ್ಟನ್ನು ತೆಗೆದು ಫ್ರಿಡ್ಜ್‌ನಲ್ಲಿಟ್ಟರೆ ಹೆಚ್ಚು ದಿನ ಬಾಳಿಕೆ ಬರುತ್ತದೆ.
- ಈರುಳ್ಳಿ ಸಿಪ್ಪೆ ತೆಗೆದು ನೀರಿನಲ್ಲಿ ನೆನೆಸಿ ಇಟ್ಟು ನಂತರ ಕತ್ತರಿಸಿದರೆ ಕಣ್ಣೀರು ಬರೋದಿಲ್ಲ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ