ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಪತ್ರೆಯ ಲಿಫ್ಟ್ನಲ್ಲಿ 12 ಮಂದಿ ರೋಗಿಗಳು ಸಿಲುಕಿಕೊಂಡಿದ್ದು, 20 ನಿಮಿಷಗಳ ಬಳಿಕ ಅವರನ್ನು ರಕ್ಷಣೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಕೆಲವು ರೋಗಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ, ಆಸ್ಪತ್ರೆಯ ಎರಡನೇ ಮಹಡಿಗೆ ಹೋಗಲು ಲಿಫ್ಟ್ ಪ್ರವೇಶಿಸಿದ್ದರು. ಲಿಫ್ಟ್ ಮೇಲಕ್ಕೆ ಹೋಗುತ್ತಿದ್ದಾಗ, ಅದು ಮಧ್ಯದಲ್ಲಿ ನಿಂತು ಸಿಲುಕಿಕೊಂಡಿತು.
ಭಯಭೀತರಾದ ರೋಗಿಗಳು ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದರು, ಘಟನೆಯ ಸಮಯದಲ್ಲಿ ಲಿಫ್ಟ್ ನೋಡಿಕೊಳ್ಳುವ ಎಲಿವೇಟರ್ ಗಳು ಅಲ್ಲಿ ಇರಲಿಲ್ಲ. ನಂತರ ಅವರನ್ನು ಕರೆಸಿ ಕೀಯಿಂದ ಲಿಫ್ಟ್ ಅನ್ನು ತೆರೆದು ಜನರನ್ನು ರಕ್ಷಿಸಲಾಗಿದೆ.