ರಾತ್ರಿ ಹೊತ್ತು ಭಯೋತ್ಪಾದನೆ, ಹಗಲಿನಲ್ಲಿ ವ್ಯಾಪಾರ: ಪಾಕ್ ಗೆ ಜೈಶಂಕರ್ ಚಾಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾತ್ರಿ ಹೊತ್ತು ಭಯೋತ್ಪಾದನೆ, ಹಗಲಿನಲ್ಲಿ ವ್ಯಾಪಾರ ನಡೆಸುತ್ತಿರುವುದನ್ನು ನಾವು ಸಹಿಸುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಪಾಕಿಸ್ತಾನದ(Pakistan) ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಇಂಡಿಯಾ ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜೈಶಂಕರ್ ,ಸಾರ್ಕ್ SAARC ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ) ಕುರಿತು ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚು ಮಾತನಾಡಿಲ್ಲ. ನಾವು ಈ ಬಗ್ಗೆ ಸಭೆ ನಡೆಸಿಲ್ಲ. ಯಾಕೆಂದರೆ, ಸಾರ್ಕ್ ನಲ್ಲಿರುವ ಸದಸ್ಯ ರಾಷ್ಟ್ರವೊಂದು ಉತ್ತಮ ಸದಸ್ಯತ್ವ ಹೊಂದಬೇಕಾದ ಸಾಮಾನ್ಯ ರೀತಿ ನೀತಿಗಳನ್ನು ಹೊಂದಿಲ್ಲ ಎಂದರು.

ಇಂದು ಸಾರ್ಕ್ ಸಭೆ ನಡೆಸುವುದಕ್ಕೆ ಅಡ್ಡಿಯಾಗಿರುವುದೇ ಆ ರಾಷ್ಟ್ರ . ಭಯೋತ್ಪಾದನಾ ಕೃತ್ಯಗಳನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ನಾನು ಹೇಳಿದ್ದೇನೆ ಎಂದು ನಿಮಗೆ ತಿಳಿದಿದೆ. ಹಾಗಾಗಿ ಸಹಕಾರ ಹೇಗೆ ಮುಂದುವರಿಯುತ್ತದೆ? ಅಲ್ಲಿ ಸಮಸ್ಯೆಗಳಿವೆ ಎಂದು ನಾನು ಭಾವಿಸುತ್ತೇನೆ. ಆ ಸಮಸ್ಯೆಗಳ ಗಂಭೀರತೆಯನ್ನು ಗುರುತಿಸಲು ಇದು ತಕ್ಕ ಸಮಯ. ರಾತ್ರಿ ವೇಳೆ ಭಯೋತ್ಪಾದನೆಯಲ್ಲಿ ತೊಡಗಿ ಹಗಲಿನಲ್ಲಿ ವ್ಯಾಪಾರ ಮಾಡಲು ಅನುಮತಿಸುವುದಿಲ್ಲ. ಇದರಿಂದ ದೇಶವು ಉತ್ತಮವಾಗಿ ಸೇವೆ ಸಲ್ಲಿಸುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.

ಈ ಹಿಂದೆಯೂ ಸಹ, ಜೈಶಂಕರ್ ಅವರು ಸಾರ್ಕ್ ಸಕ್ರಿಯ ಸಂಘಟನೆಯಾಗಿಲ್ಲದ ಕಾರಣಕ್ಕೆ ಪಾಕಿಸ್ತಾನವನ್ನು ದೂಷಿಸಿದ್ದರು.

SAARC ದಕ್ಷಿಣ ಏಷ್ಯಾದ ಎಂಟು ದೇಶಗಳ ಪ್ರಾದೇಶಿಕ ಅಂತರಸರ್ಕಾರಿ ಸಂಸ್ಥೆಯಾಗಿದೆ . ಇದರಲ್ಲಿ ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ಸದಸ್ಯ ರಾಷ್ಟ್ರಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!