‘ಆರ್‌ಆರ್‌ಆರ್’ ಸಿನಿಮಾ ತಂಡಕ್ಕೆ ಮತ್ತೊಂದು ಗೌರವ: ಆಸ್ಕರ್ ಜ್ಯೂರಿಯಾಗಿ ರಾಮ್‌ಚರಣ್, ಜ್ಯೂ.ಎನ್‌ಟಿಆರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

2022ರಲ್ಲಿ ತೆರೆ ಕಂಡ ‘ಆರ್‌ಆರ್‌ಆರ್’ ಸಿನಿಮಾ ಸೂಪರ್ ಡೂಪರ್ ಹಿಟ್ ಸಿನಿಮಾವಾಗಿ ಗಲ್ಲಾಪೆಟ್ಟಿಗೆಯಲ್ಲಿ ಒಂದು ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಇತಿಹಾಸ ಬರೆದಿತ್ತು.

ಇತ್ತೀಚಿಗೆ ‘ನಾಟು ನಾಟು’ ಹಾಡಿಗೆ ಆಸ್ಕರ್ ಅವಾರ್ಡ್ ಕೂಡ ತಮ್ಮದಾಗಿಸಿಕೊಂಡಿತ್ತು . ಇದೀಗ ಆಸ್ಕರ್ ವಿಜೇತರನ್ನ ಆಯ್ಕೆ ಮಾಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

RRR ಸಿನಿಮಾ ತಂಡದ ನಾಲ್ವರಿಗೆ ಆಸ್ಕರ್ ಜ್ಯೂರಿ ಸದಸ್ಯರಾಗುವ ಅವಕಾಶ ಸಿಕ್ಕಿದೆ. ಅದರಲ್ಲಿ ರಾಮ್ ಚರಣ್ (Ramcharan), ಜ್ಯೂ.ಎನ್‌ಟಿಆರ್ (Jr.ntr), ಕೀರವಾಣಿ ಅವರಿಗೆ ಆಸ್ಕರ್ ವಿಜೇತರ ಆಯ್ಕೆಯಲ್ಲಿ ಮತ ಚಲಾಯಿಸುವ ಅವಕಾಶ ಸಿಕ್ಕಿದೆ.

ಈ ವರ್ಷ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಬಹಳ ಅದ್ಧೂರಿಯಾಗಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು. 95ನೇ ಅಕಾಡೆಮಿ ಅವಾರ್ಡ್ಸ್ ವೇದಿಕೆಯಲ್ಲಿ ಆರ್ ಸಿನಿಮಾ ಆರ್ಭಟ ಜೋರಾಗಿತ್ತು. ಚಿತ್ರದ ‘ನಾಟು ನಾಟು’ ಸಾಂಗ್ ಸ್ಪೆಷಲ್ ಡ್ಯಾನ್ಸ್ ಪರ್ಫಾರ್ಮನ್ಸ್ ಇತ್ತು. ಆಸ್ಕರ್‌ ಅಂಗಳದಲ್ಲಿ ಇತ್ತೀಚಿಗಷ್ಟೇ ಆಸ್ಕರ್ ಗೆದ್ದು ಬಿಗಿದ್ದಲ್ಲದೇ ಈಗ ಆಸ್ಕರ್ ಜ್ಯೂರಿ ಮೆಂಬರ್ಸ್ ಆಗುವ ಅವಕಾಶವನ್ನು ಈ ಸಿನಿಮಾ ತಂದುಕೊಟ್ಟಿದೆ. ಈ ಬಗ್ಗೆ ಇದೀಗ ಅಕಾಡೆಮಿ ಪಟ್ಟಿ ರಿಲೀಸ್ ಮಾಡಿ ಟಾಲಿವುಡ್‌ಗೆ ಸಿಹಿಸುದ್ದಿ ಕೊಟ್ಟಿದೆ.

ರಾಮ್‌ಚರಣ್, ಜ್ಯೂ.ಎನ್‌ಟಿಆರ್, ಮಣಿರತ್ನಂ, ಕರಣ್ ಜೋಹರ್, ಚೈತನ್ಯಾ ತಮಹಾನ್, ಷಾನೆಕ್ ಸೇನ್, ಎಂ.ಎಂ ಕೀರವಾಣಿ, ಚಂದ್ರಬೋಸ್, ಸಿದ್ದಾರ್ಥ್ ಕಪೂರ್, ಸಾಬು ಸಿರಿಲ್, ಸೆಂಥಿಲ್ ಸೇರಿದಂತೆ ಹಲವರು ಆಸ್ಕರ್ ಜ್ಯೂರಿ ಮೆಂಬರ್ಸ್ ಪಟ್ಟಿಯಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!