17 ವರ್ಷದ ಯುವಕನ ಹತ್ಯೆ: ಹೊತ್ತಿ ಉರಿದ ಫ್ರಾನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫ್ರಾನ್ಸ್‌ನಲ್ಲಿ ಟ್ರಾಫಿಕ್ ತಪಾಸಣೆ ವೇಳೆ 17 ವರ್ಷದ ಯುವಕನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದು, ಪೊಲೀಸರ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

France deploys 40,000 police amid fears of violent riots: All you need to know | World News - Hindustan Timesಸಿಕ್ಕಸಿಕ್ಕ ಕಟ್ಟಡಗಳಿಗೆ, ಪೊಲೀಸ್ ವಾಹನಗಳಿಗೆ ಜನರು ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯನ್ನು ಕೊಂದ ಪೊಲೀಸ್ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ಕೊಲೆ ಆಪಾದನೆ ಹೊರಿಸಿ, ನ್ಯಾಯಾಧೀಶರು ತನಿಖೆ ನಡೆಸಲಿದ್ದಾರೆ ಎಂದು ಫ್ರಾನ್ಸ್ ಪ್ರಾಸಿಕ್ಯೂಟರ್ ಮಾಹಿತಿ ನೀಡಿದ್ದಾರೆ.

40,000 officers deployed across France amid violence after boy shot by police | STV Newsಈಗಾಗಲೇ ಇಬ್ಬರು ಪೊಲೀಸರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಇತ್ತ ಫ್ರಾನ್ಸ್‌ನಲ್ಲಿ ಪ್ರತಿಭಟನೆ ಉಗ್ರರೂಪ ಪಡೆದಿದ್ದು, ಇಡೀ ಫ್ರಾನ್ಸ್ ಹೊತ್ತಿ ಉರಿಯುತ್ತಿದೆ. ಹಿಂಸಾಚಾರ ಸಂಬಂಧ ದೇಶಾದ್ಯಂತ ಈವರೆಗೂ 400 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.

Police brace for more violent protests over French teen's killing | Philstar.comಈ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮಾತನಾಡಿದ್ದು, ತುರ್ತು ಸಭೆ ನಡೆಸಿದ್ದೇವೆ, ಚಾಲಕನ ಹತ್ಯೆ ಅನಿರೀಕ್ಷಿತ ಹಾಗೂ ಅಕ್ಷಮ್ಯ, ಇದನ್ನು ಸಮರ್ಥಿಸುವುದಿಲ್ಲ. ಆದರೆ ಜನತೆ ಶಾಂತವಾಗಬೇಕು ಎಂದಿದ್ದಾರೆ.

France braces for another night of violence after police shooting | Toronto Sunಜನರು ಸಾರ್ವಜನಿಕ ಕಟ್ಟಡ, ಸಿಕ್ಕಸಿಕ್ಕ ಕಾರ್‌ಗಳಿಗೆ ಬೆಂಕಿ ಹಚ್ಚಿದ್ದು, ಇವರನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಯುವಕನನ್ನು ಕೊಂದ ಪೊಲೀಸ್ ಆಫೀಸರ್‌ಗಳು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

Widespread violence in France after police shot a teenager dead during a traffic stopಟ್ರಾಫಿಕ್ ತಪಾಸಣೆ ವೇಳೆ 17 ವರ್ಷದ ನೌಹೆಲ್ ಎಂಬಾತನನ್ನು ಗುಂಡಿಕ್ಕಿ ಪೊಲೀಸರು ಕೊಂದಿದ್ದರು. ಕಾರಣವಿಲ್ಲದೆ ಗುಂಡು ಹಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಿಂದ ಸಿಟ್ಟಿಗೆದ್ದ ಫ್ರಾನ್ಸ್ ಜನತೆ ಪೊಲೀಸರ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ಈಗಾಗಲೇ 50 ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ. 40 ಕ್ಕೂ ಹೆಚ್ಚು ಪೊಲೀಸ್ ವಾಹನಗಳಿಗೆ ಬೆಂಕಿ ಇಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!