ಹೊಸದಿಗಂತ ವರದಿ ಕಡಬ:
ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ಬಗ್ಗೆ ಚರ್ಚೆ ನಡೆಸುತ್ತಿದೆ, ಈ ನಡುವೆ ಕಡಬದಲ್ಲಿ ಮೇಯಲು ಬಿಟ್ಟಿದ್ದ ಹೋರಿಯೊಂದು ನಾಪತ್ತೆಯಾಗಿದ್ದು, ಗೋ ಕಳ್ಳರ ಪಾಲಾಗಿರುವ ಶಂಕೆ ಮೂಡಿದೆ.
ಕಡಬದ ಅಡ್ಡಗದ್ದೆಯ ಇಕ್ಬಾಲ್ ಎಂಬವರಿಗೆ ಸೇರಿದ ಹೋರಿ ಇದಾಗಿದ್ದು ಜೂನ್.25 ರಿಂದ ಅಡ್ದಗದ್ದೆ ವಠಾರದಿಂದ ಕಾಣೆಯಾಗಿದೆ. ಹೋರಿಯ ಬಲಕಿವಿಯಲ್ಲಿ ಆಧಾರ್ ಟ್ಯಾಗ್ ಇದ್ದು ಹೋರಿಯನ್ನು ಪತ್ತೆ ಹಚ್ಚಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡುವುದಾಗಿ ವಾರಿಸುದಾರರು ಘೋಷಿಸಿದ್ದಾರೆ.
ಹೋರಿಯ ಚಿತ್ರವಿರುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ. ವಿಪರ್ಯಾಸವೆಂದರೆ ಇದುವರೆಗೂ ಹೋರಿಯ ಬಗ್ಗೆ ಯಾವುದೇ ಸುಳಿವಿಲ್ಲ.