ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ ಬಿ.ಶೆಟ್ಟಿ ನಟನೆಯ ಟೋಬಿ ಈಗಾಗಲೇ ಪೋಸ್ಟರ್ ಹವಾ ಮಾಡಿದೆ.
ರಾಜ್ ಅಭಿನಯದ ಮತ್ತೊಂದು ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ ಶೂಟಿಂಗ್ ಕೂಡ ಮುಗಿದಿದ್ದು, ಟೋಬಿಗೂ ಮುನ್ನ ಅದೇ ರಿಲೀಸ್ ಆಗಬೇಕಿತ್ತು.
ಆದರೆ ಟೋಬಿ ಮೊದಲು ರಿಲೀಸ್ ಆಗಲಿದ್ದು ಎಲ್ಲರಿಗೂ ಆಶ್ಚರ್ಯವಾಗಿತ್ತು. ಈ ಬಗ್ಗೆ ರಾಜ್ ಮಾತನಾಡಿದ್ದು, ಸ್ವಾತಿ ಮುತ್ತಿನ ಮಳೆ ಹನಿಯೇ ಒಟಿಟಿಗಾಗಿ ಮಾಡಿರುವ ಸಿನಿಮಾ. ಇನ್ನೂ ಸಣ್ಣ ಪುಟ್ಟ ಕೆಲಸಗಳು ಬಾಕಿ ಇವೆ. ಯಾವುದಾದರೂ ಒಟಿಟಿಯಲ್ಲಿ ಒಳ್ಳೆಯ ಡೀಲ್ ಸಿಕ್ಕರೆ ಟೋಬಿಗೂ ಮುನ್ನ ಅದೇ ರಿಲೀಸ್ ಆಗಬಹುದು ಸದ್ಯದಲ್ಲಿಯೇ ಒಂದೊಳ್ಳೆ ಅಪ್‌ಡೇಟ್ ಕೊಡೋಣ ಎಂದಿದ್ದಾರೆ.