ದೀಪಾವಳಿಗೆ ಹೌಸ್‌ಫುಲ್‌ 5 ಸಿನಿಮಾ ರಿಲೀಸ್:‌ ನಟ ಅಕ್ಷಯ್‌ ಕುಮಾರ್‌ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ವಿಭಿನ್ನ ರೀತಿಯ ಸಿನಿಮಾಗಳ ಮೂಲಕ ಕಾಣಿಸಿಕೊಳ್ಳುತ್ತಿರುವ ನಟ ಅಕ್ಷಯ್ ಕುಮಾರ್ ಇಂದು ತಮ್ಮ ಹೊಸ ಹಾಸ್ಯಪ್ರಧಾನ ಸಿನಿಮಾದ ಹೆಸರನ್ನು ಘೋಷಿಸಿದ್ದಾರೆ.

ನಟ ಅಕ್ಷಯ್‌ ಕುಮಾರ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಕುರಿತು ಪೋಸ್ಟ್‌ ಹಾಕಿದ್ದು,“ಐದನೇ ಬಾರಿಯ ಹುಚ್ಚುತನಕ್ಕೆ ಸಿದ್ಧರಾಗಿ! @ತರುಣ್_ಮನ್ಸುಖಾನಿ ಅವರು ನಿರ್ದೇಶಿಸಿದ #ಸಾಜಿದ್ ನಾಡಿಯಾಡ್ವಾಲಾ ಅವರ #ಹೌಸ್‌ಫುಲ್ 5 ಗೆ ನಿಮ್ಮೆಲ್ಲರನ್ನು ಆಹ್ವಾನಿಸುತ್ತಿದ್ದೇನೆ. 2024ರ ದೀಪಾವಳಿಯಂದು ಚಿತ್ರಮಂದಿರಗಳಲ್ಲಿ ನಿಮ್ಮನ್ನು ನೋಡೋಣ!” ಎಂದು ಟ್ವೀಟ್‌ ಮಾಡಿದ್ದಾರೆ.

“ದೋಸ್ತಾನಾ” ಮತ್ತು “ಡ್ರೈವ್” ಚಲನಚಿತ್ರಗಳಿಗೆ ಹೆಸರುವಾಸಿಯಾದ ತರುಣ್ ಮನ್ಸುಖಾನಿ ಅವರು “ಹೌಸ್​ಫುಲ್​ 5” ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಸಿನಿಮಾ 2024ರ ದೀಪಾವಳಿಯಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!