ರಾಮ್ ಚರಣ್-ಉಪಾಸನಾ ಮಗುವಿಗೆ ನಾಮಕರಣ ಸಂಭ್ರಮ: ಹೀಗಿದೆ ನೋಡಿ ಪುಟಾಣಿ ಹೆಸರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟಾಲಿವುಡ್ ನಟ ರಾಮ್ ಚರಣ್ ತೇಜ (Ram Charan Teja) ಹಾಗೂ ಉಪಾಸನಾ ಕೋನಿಡೆಲಾ (Upasana Konidela) ಈಗಾಗಲೇ ಪೋಷಕರಾದ ಖುಷಿಯಲಿದ್ದು, ಜೂನ್ 20ರ ಮುಂಜಾನೇ ರಾಮ್ ಚರಣ್ ತೇಜ ಪತ್ನಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಇಂದು ಮಗು ಹುಟ್ಟಿದ ಹನ್ನೊಂದನೇ ದಿನವಾಗಿದ್ದು, ಮಗುವಿನ ತೊಟ್ಟಿಲ ಶಾಸ್ತ್ರ ಹಾಗೂ ನಾಮಕರಣ ಶಾಸ್ತ್ರವನ್ನು ರಾಮ್ ಚರಣ್ ಹಾಗೂ ಉಪಾಸನಾ ಹಾಗೂ ಕುಟುಂಬದವರು ಸೇರಿ ನಡೆಸಿದರು.

ರಾಮ್–ಉಪಾಸನಾ ತಮ್ಮ ಮುದ್ದಾದ ಹೆಣ್ಣು ಮಗುವಿಗೆ ಆದಿವಾಸಿ ದೇವತೆ ಚೆಂಚುದೇವಿ ಹಾಗು ಬೋರಮ್ಮ ದೇವಿಯವರ ಆಶೀರ್ವಾದದೊಂದಿಗೆ ‘ಕ್ಲಿನ್ ಕಾರಾ ಕೋನಿಡೇಲಾ’ ಎಂದು ಹೆಸರಿಟ್ಟಿದ್ದಾರೆ.

ಕ್ಲಿನ್ ಕಾರಾ ಹೆಸರಿನ ಹಿನ್ನೆಲೆಯನ್ನು ಸ್ವತಃ ಉಪಾಸನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವಂತೆ, ಕ್ಲಿನ್ ಕಾರಾ ಎಂದರೆ ದೈವಿಕ ತಾಯಿ ಶಕ್ತಿ ಎನ್ನುವ ಅರ್ಥವಿದೆ. ಅಂದಹಾಗೆ ಈ ಹೆಸರನ್ನು ಲಲಿತಾ ಸಹಸ್ರನಾಮದಿಂದ ತೆಗೆದುಕೊಳ್ಳಲಾಗಿದೆ ಎಂದು ಬಹಿರಂಗ ಪಡಿಸಿದ್ದಾರೆ. ‘ಕ್ಲಿನ್ ಕಾರ’ ಪ್ರಕೃತಿಯ ಸಾಕಾರವನ್ನು ಪ್ರತಿನಿಧಿಸುತ್ತದೆ. ದೈವಿಕ ತಾಯಿಯಾದ ‘ಶಕ್ತಿ’ಯ ಪರಮ ಶಕ್ತಿಯನ್ನು ಆವರಿಸುತ್ತದೆ. ಮತ್ತು ಶಕ್ತಿಯುತವಾದ ಕಂಪನವನ್ನು ಹೊಂದಿದೆ ಎಂದು ಹೆಸರಿನ ಬಗ್ಗೆ ವಿವರಣೆ ನೀಡಿದ್ದಾರೆ.

‘ಪುಟ್ಟ ರಾಜಕುಮಾರಿಯು ಬೆಳೆದಂತೆ ಈ ಗುಣಗಳನ್ನು ತನ್ನ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳುತ್ತಾಳೆ ಎಂದು ನಮಗೆಲ್ಲರಿಗೂ ಖಚಿತವಾಗಿದೆ’ ಎಂದು ಹೇಳಿದ್ದಾರೆ. ಹೆಸರಿನ ಬಗ್ಗೆ ದೀರ್ಘವಾದ ಪೋಸ್ಟ್ ಶೇರ್ ಮಾಡಿ ಚಿರಂಜೀವಿ ದಂಪತಿ ಮತ್ತು ಉಪಾಸನಾ ತಂದೆ-ತಾಯಿ ಮಗುವಿನ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ.

‘ಕ್ಲೀಂಕಾರೀ’ ಹೆಸರು ಲಲಿತಾ ಸಹಸ್ರನಾಮದ 125 ನೇ ಪಾದದಲ್ಲಿ ಬರುತ್ತೆ, ಅದರಿಂದಲೇ ಸ್ಪೂರ್ತಿ ಪಡೆದು ಕ್ಲಿನ್ ಕಾರಾ ಎಂದು ಮಗಳಿಗೆ ಹೆಸರಿಟ್ಟಿದ್ದಾರೆ ರಾಮ್-ಉಪಾಸನಾ.

ಉಪಾಸನಾರ ಇನ್​ಸ್ಟಾಗ್ರಾಂಗೆ ಪ್ರತಿಕ್ರಿಯಿಸಿರುವ ಹಲವರು ಶುಭಾಷಯಗಳನ್ನು ಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!