ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದಿಢೀರ್ ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.
ಭಾರತ ಹಾಗೂ ರಷ್ಯಾ ನಡುವೆದ್ವಿಪಕ್ಷೀಯ ಒಪ್ಪಂದ, ವ್ಯಾಪಾರ ವಹಿವಾಟುಗಳಿವೆ. ಇದಕ್ಕೂ ಮಿಗಿಲಾದ ಗೆಳೆತನವಿದೆ. ಇದೀಗ ಇಂದು ಉಕ್ರೇನ್ ಯುದ್ಧದ ಕುರಿತು ಮಹತ್ವದ ಚರ್ಚೆಗಾಗಿ ಉಕ್ರೇನ್ ಯುದ್ಧದಿಂದ ನಿರ್ಮಾಣವಾಗಿರುವ ಪರಿಸ್ಥಿತಿತಿ, ಉಕ್ರೇನ್ ಸುತ್ತಮುತ್ತಲಿನ ಪರಿಸ್ಥಿತಿ ಕುರಿತು ಮೋದಿ ಜೊತೆ ಮಾತುಕತೆ ನಡೆಸಿದ್ದಾರೆ. ಮಾಸ್ಕೋದಲ್ಲಿ ಇತ್ತೀಚೆಗೆ ನಡೆದ ಸಶಸ್ತ್ರ ದಂಗೆಯನ್ನು ಹತ್ತಿಕ್ಕಿದ ರೀತಿಯನ್ನು ಪುಟಿನ್ ವಿವರಿಸಿದ್ದಾರೆ.
ರಷ್ಯಾದ ಕಾರ್ಯಕ್ರಮವೊಂದರಲ್ಲಿ ವ್ಲಾದಿಮಿರ್ ಪುಟಿನ್, ಭಾರತ ಹಾಗೂ ಪ್ರಧಾನಿ ಮೋದಿಯನ್ನು ಹೊಗಳಿದ ಬೆನ್ನಲ್ಲೇ ಇದೀಗ ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿರುವುದು ಭಾರಿ ಸಂಚಲನ ಸೃಷ್ಟಿಸಿದೆ.
ಇತ್ತೀಚೆಗೆ ಪುಟಿನ್ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಹಾಗೂ ಭಾರತವನ್ನು ಪ್ರಶಂಸಿಸಿದ್ದರು. ಮೋದಿ ಅವರನ್ನು ರಷ್ಯಾದ ಅತ್ಯಾಪ್ತ ಮಿತ್ರ ಎಂದು ಬಣ್ಣಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಬಹುವಾಗಿ ಹೊಗಳಿದ್ದಾರೆ. ಮೋದಿ ಜಾರಿಗೊಳಿಸಿದ ಈ ಯೋಜನೆ ಇದೀಗ ಭಾರತದ ಆರ್ಥಿಕತೆಯಲ್ಲಿ ಬಿಂಬಿತವಾಗಿದೆ ಎಂದು ಪುಟಿನ್ ಹೇಳಿದ್ದರು.