ವಾಹನ ಸವಾರರಿಗೆ ಇನ್ಮುಂದೆ ‘ನೈಸ್ ರಸ್ತೆ’ ದುಬಾರಿ: ನಾಳೆಯಿಂದಲೇ ಟೋಲ್ ದರ ಏರಿಕೆಯ ಬಿಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಾಹನ ಸವಾರರಿಗೆ ಇನ್ಮುಂದೆ ‘ನೈಸ್ ರಸ್ತೆ’ ದುಬಾರಿಯಾಗಲಿದೆ. ಅದಕ್ಕೆ ಕಾರಣ ಟೋಲ್ ದರ ಶೇ 11ರಷ್ಟು ಹೆಚ್ಚಳವಾಗಿದೆ. ನಾಳೆಯಿಂದ ವಾಹನ ಸವಾರರಿಗೆ ಟೋಲ್ ದರದ ಬಿಸಿ ತಟ್ಟಲಿದೆ.

ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ ಲಿಮಿಟೆಡ್ (ನೈಸ್) ಟೋಲ್ ದರವನ್ನು ಶೇಕಡಾ 11 ರಷ್ಟು ಹೆಚ್ಚಿಸಿದೆ. ಪರಿಷ್ಕೃತ ದರಗಳು ನಾಳೆಯಿಂದ ಜಾರಿಗೆ ಬರಲಿವೆ ಎಂದು ನೈಸ್ ಶುಕ್ರವಾರ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.

ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಕ್ಲೋವರ್ ಲೀಫ್ ಜಂಕ್ಷನ್, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ ಮತ್ತು ಲಿಂಕ್ ರಸ್ತೆ ಮಾರ್ಗಗಳಲ್ಲಿ ನೈಸ್ ರಸ್ತೆಯನ್ನು ಆಗಾಗ್ಗೆ ಬಳಸುವ ಪ್ರಯಾಣಿಕರು ಶನಿವಾರದಿಂದ ಹೆಚ್ಚುವರಿ ದರ ತೆರಬೇಕಾಗುತ್ತದೆ.

ನೈಸ್ ರಸ್ತೆಯು ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನಿಂದ ನಿರ್ಮಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಖಾಸಗಿ ಎಕ್ಸ್‌ಪ್ರೆಸ್‌ ವೇ ಆಗಿದೆ. ಆರು ಪಥಗಳ ಖಾಸಗಿ ಎಕ್ಸ್‌ಪ್ರೆಸ್‌ ವೇ ಬೆಂಗಳೂರಿನ ವಿವಿಧ ಭಾಗಗಳನ್ನು ಸಂಪರ್ಕಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!