ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಬಾಕ್ಸಿಂಗ್ಸ್ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಪದಕ ತಂದು ಕೊಟ್ಟಿರುವ ಮೇರಿ ಕೋಮ್ (Mary Kom ) ಅವರಿಗೆ ಆಗ್ನೇಯ ಇಂಗ್ಲೆಂಡ್ನ ವಿಂಡ್ಸರ್ನಲ್ಲಿ ಯುಕೆ-ಇಂಡಿಯಾ ಪ್ರಶಸ್ತಿ ಸಮಾರಂಭದಲ್ಲಿ ಗ್ಲೋಬಲ್ ಇಂಡಿಯನ್ ಐಕಾನ್ ಆಫ್ ದಿ ಇಯರ್ (Global Indian Icon of the Year) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಜೂನ್ 29 ರಂದು ಈ ಸಮಾರಂಭ ನಡೆದಿದ್ದು, ಮೇರಿ ಕೋಮ್ ಅವರು ಬ್ರಿಟನ್ನ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಈ ವೇಳೆ 4ತಮ್ಮ 20 ವರ್ಷಗಳ ಕಠಿಣ ಪರಿಶ್ರಮ ಮತ್ತು ಬಾಕ್ಸಿಂಗ್ಸ್ ಜೀವನದ ಕುರಿತು ಮಾತನಾಡಿದ ಅವರು, ನಾನು 20 ವರ್ಷಗಳಿಂದ ಬಾಕ್ಸಿಂಗ್ ರಿಂಗ್ನಲ್ಲಿ ಹೋರಾಡುತ್ತಿದ್ದೇನೆ. ನನ್ನ ಜೀವನದಲ್ಲಿ, ಬಾಕ್ಸಿಂಗ್ಗಾಗಿ ಸಾಕಷ್ಟು ಪ್ರಯತ್ನ, ಕಠಿಣ ಪರಿಶ್ರಮವನ್ನು ಹಾಕಿದ್ದೇನೆ. ನನ್ನ ದೇಶಕ್ಕಾಗಿ, ನನ್ನ ಕುಟುಂಬಕ್ಕಾಗಿ ತ್ಯಾಗ ಮಾಡುತ್ತಿದ್ದೇನೆ. ಈ ಮಾನ್ಯತೆಗಾಗಿ ನಾನು ನನ್ನ ಹೃದಯಾಂತರಾಳದಿಂದ ನಿಜವಾಗಿಯೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಯುಕೆ-ಇಂಡಿಯಾ ವೀಕ್ ಅಂಗವಾಗಿ ಐಜಿಎಫ್ (ಇಂಡಿಯಾ ಗ್ಲೋಬಲ್ ಫೋರಂ) ಈ ಪ್ರಶಸ್ತಿ ಸಮಾರಂಭ ಆಯೋಜಿಸಿತ್ತು. ಅದರಲ್ಲಿ ಆಸ್ಕರ್ ನಾಮನಿರ್ದೇಶನಗೊಂಡ ‘ಎಲಿಜಬೆತ್: ದಿ ಗೋಲ್ಡನ್ ಏಜ್’ ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್ ಅವರು ಎರಡೂ ದೇಶಗಳಲ್ಲಿ ಚಲನಚಿತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದರು.