ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಕೀನ್ಯಾದ ಲೊಂಡಿಯಾನಿ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 48 ಮಂದಿ ಮೃತಪಟ್ಟಿದ್ದಾರೆ.
ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಹಡಗಿಗೆ ಸಂಬಂಧಿಸಿದ ವಸ್ತುಗಳನ್ನು ಸಾಗಿಸುತ್ತಿದ್ದ ಬೃಹತ್ ಕಂಟೇನರ್ ಚಾಲಕನ ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಡಿಕ್ಕಿಯಾಗಿದೆ.
ತದನಂತರ ಪಾದಚಾರಿಗಳ ಮೇಲೂ ಕಂಟೇನರ್ ಹರಿದಿದ್ದು, ಒಟ್ಟಾರೆ 48 ಮಂದಿ ಮೃತಪಟ್ಟಿದ್ದಾರೆ. ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಧಾನಿ ನೈರೋಬಿಯ ಲೋಡಿಯಾನಿಯ ರಿಫ್ಟ್ ವ್ಯಾಲಿ ಪಟ್ಟಣದ ಸಮೀಪ ಅಪಘಾತ ಸಂಭವಿಸಿದೆ.