ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ಸಾಕಷ್ಟು ಮಂದಿ ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಆದರೆ ಇನ್ನೂ ಸಾಕಷ್ಟು ಮಂದಿ ಅರ್ಜಿಸಲ್ಲಿಸುವುದು ಬಾಕಿ ಇದೆ, ಅರ್ಜಿ ಸಲ್ಲಕೆ ಆಗುವವರೆಗೂ ಕರೆಂಟ್ ಬಿಲ್ ಕಟ್ಟಬೇಕಾಗುತ್ತದೆ. ಎಲ್ಲರೂ ಆದಷ್ಟು ಬೇಗ ಅರ್ಜಿ ಸಲ್ಲಿಸಿ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.
ಗೃಹಜ್ಯೋತಿಗೆ ಈ ತಿಂಗಳು ಅರ್ಜಿ ಸಲ್ಲಿಸಿದರೆ ಮುಂದಿನ ತಿಂಗಳಿನಿಂದ ಕರೆಂಟ್ ಫ್ರೀ. ಆದರೆ ತಿಂಗಳ 25ನೇ ತಾರೀಕಿನ ಒಳಗೆ ಅರ್ಜಿ ಸಲ್ಲಿಸಬೇಕು. ಅದರ ನಂತರ ಸಲ್ಲಿಸಿದರೆ ಮುಂದಿನ ತಿಂಗಳು ಬಿಟ್ಟು ಅದರ ನಂತರದ ತಿಂಗಳಿಗೆ ಶೂನ್ಯ ಬಿಲ್ ಬರುತ್ತದೆ ಎಂದಿದ್ದಾರೆ.