ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ರಾನ್ಸ್ನಲ್ಲಿ ಪೊಲೀಸರು 17 ವರ್ಷದ ಬಾಲಕನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದನ್ನು ಖಂಡಿಸಿ ಫ್ರಾನ್ಸ್ನಾದ್ಯಂತ ಪ್ರತಿಭಟನೆ ನಡೆಯುತ್ತಿದೆ.
ಪ್ರತಿಭಟನೆ ಇದೀಗ ಹಿಂಸಾಚಾರ ಸ್ವರೂಪ ಪಡೆದಿದ್ದು, ಫ್ರಾನ್ಸ್ ಸ್ಥಿತಿಯೇ ಅಲ್ಲೋಲಕಲ್ಲೋಲವಾಗಿದೆ, ಸಿಕ್ಕಸಿಕ್ಕವರಿಗೆ ಗುಂಡು ಹಾರಿಸುವುದು, ಮನೆಗಳು ಮಳಿಗೆಗಳಿಗೆ ಬೆಂಕಿ ಇಡುವುದು, ವಾಹನಗಳನ್ನು ಜಖಂಗೊಳಿಸಲಾಗುತ್ತಿದೆ.
ನಾಗರಿಕರು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದು, ಈಗಾಗಲೇ 200ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. 875 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಫ್ರಾನ್ಸ್ನಲ್ಲಿ ಒಟ್ಟಾರೆ 40 ಸಾವಿರ ಭದ್ರತಾ ಪಡೆ ನಿಯೋಜಿಸಲಾಗಿದೆ.
17 ವರ್ಷದ ನಹೆಲ್ ಎಂಬಾತ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾನೆ ಎಂದು ಪೊಲೀಸರು ಆತನಿಗೆ ಗುಂಡು ಹಾರಿಸಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆದ ನಂತರ ಗಲಭೆ ಆರಂಭವಾಗಿದೆ.