ಹೊಸದಿಗಂತ ಡಿಜಿಟಲ್ ಡೆಸ್ಕ್:
ಜುಲೈ 20 ರಿಂದ ಆಗಸ್ಟ್ 11ರವರೆಗೆ ಸಂಸತ್ನ ಮುಂಗಾರು ಅಧಿವೇಶನ(Monsoon session) ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅವರು ‘ಸಂಸತ್ತಿನ ಮುಂಗಾರು ಅಧಿವೇಶನ 2023 ಜುಲೈ 20 ರಿಂದ ಪ್ರಾರಂಭವಾಗಿ, ಆಗಸ್ಟ್ 11 ರವರೆಗೆ ನಡೆಯುತ್ತದೆ. ಇನ್ನು ಮಾನ್ಸೂನ್ ಅಧಿವೇಶನದಲ್ಲಿ ಶಾಸಕಾಂಗ ವ್ಯವಹಾರ ಮತ್ತು ಇತರ ವಿಷಯಗಳ ಕುರಿತು ಚರ್ಚೆಗಳಿಗೆ ಕೊಡುಗೆ ನೀಡಲು ಎಲ್ಲಾ ಪಕ್ಷಗಳನ್ನು ಒತ್ತಾಯಿಸಿದ್ದಾರೆ.
ಈ ಅಧಿವೇಶನವು 23 ದಿನಗಳ ಕಾಲ ನಡೆಯಲಿದ್ದು, 17 ಸಭೆಗಳನ್ನು ಹೊಂದಿರುತ್ತದೆ ಎಂದು ತಿಳಿಸಿದ್ದಾರೆ, ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಹೊಸ ಸಂಸತ್ತಿನ ಕಟ್ಟಡವು ಮುಂಬರುವ ಮುಂಗಾರು ಅಧಿವೇಶನಕ್ಕೆ ಆತಿಥ್ಯ ವಹಿಸಲಿದೆ.