ಅಕ್ಕಿ ಬದಲು ಹಣ ನೀಡಿದರೆ ಬಿಜೆಪಿಗೆ ಯಾಕೆ ಆತಂಕ: ಸಚಿವ ಸಂತೋಷ ಲಾಡ್

ಹೊಸದಿಗಂತ ವರದಿ, ಹುಬ್ಬಳ್ಳಿ:

ಅನ್ನ ಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ನೀಡಿದರೆ ಬಿಜೆಪಿ ಅವರಿಗೆ ಯಾಕೆ ಆತಂಕವಿದೆ ಗೊತ್ತಾಗುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹರಿಹಾಯ್ದರು.

ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ ಎಂಬ ಕಾರಣಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಅಕ್ಕಿ ಕರೆದಿಸುವರೆಗೂ ಹಣ ನೀಡಲು ನಿರ್ಧಾರಿಸಿದ್ದಾರೆ. ಇದರಿಂದ ಜನರ ಅಕ್ಕಿ ಅಥವಾ ಏನಾದರೂ ಖರೀದಿಸಬಹುದು ಎಂದರು.

ಪ್ರಧಾನಿ‌ ಮೋದಿ ಅವರು ೧೫ ಲಕ್ಷ ನೀಡುತ್ತೇನೆ, ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ‌ ನೀಡಿದ್ದರು. ಯಾಕೆ ಕೊಡಲಿಲ್ಲ. ಸುಳ್ಳು ಹೇಳುವುದೆ ಬಿಜೆಪಿ ಅವರ ಕಾಯಕವಾಗಿದೆ ಎಂದು ಹೇಳಿದರು.

ಯೋಜನೆ ಜಾರಿಗೆ ತಂದವರು ಅದರ ಬಗ್ಗೆ ಗೊತ್ತಿಲ್ಲ ಅಂದರೆ ಏನು ಮಾಡಬೇಕು. ಕಾಂಗ್ರೆಸ್ ಭರವಸೆ ನೀಡಿದಂತೆ ಈಡೇರಿಸುತ್ತದೆ. ಬರುವ ದಿನಗಳಲ್ಲಿ ಅಕ್ಕಿ ನೀಡುತ್ತೇವೆ. ದುಡ್ಡುಕೊಟ್ಟರೆ ಬಿಜೆಪಿ ಅವರಿಗೆ ತೊಂದರೆಯಾಗುತ್ತಿಲ್ಲ. ನಮ್ಮ ನಾಯಕರ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ ಎಂದು ತಿಳಿಸಿದರು.

ಸ್ಮಾಟ್೯ ಸಿಟಿ ಯೋಜನೆ ಬಗ್ಗೆ ವಿವರ ಪಡೆಯುತ್ತೇನೆ. ಬಿಜೆಪಿ ಭ್ರಷ್ಟಾಚಾರ ಬಗ್ಗೆ ನಾನು ಮಾತನಾಡುವುದಿಲ್ಲ. ಗೋ ಹತ್ಯೆ ನಿಷೇಧ ವಾಪಾಸ್ ಪಡೆ ಬಾರದು ಎಂದು ಸ್ವಾಮೀಜಿ ಆಗ್ರಹ ಮಾಡುತ್ತಿದ್ದು, ಅವರ ಅಭಿಪ್ರಾಯ ತಿಳಿಸಿದ್ದಾರೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ವಿದ್ಯುತ್ ದರ ಇಳಿಕೆ ಬಗ್ಗೆ ಮುಖ್ಯ ಮಂತ್ರಿ ಅವರಿಗೆ ಒತ್ತಡ ತಂದು ಕಡಿಮೆ ಮಾಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!