ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಬದರಿನಾಥ್ ರಾಷ್ಟ್ರೀಯ ಹೆದ್ದಾರಿ (NH-7) ಅನ್ನು ಲಂಬಗಡ ಮತ್ತು ಖಚಡಾ ಡ್ರೈನ್ಗಳಲ್ಲಿ 13 ಗಂಟೆಗಳ ಕಾಲ ಮುಚ್ಚಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದರಿಂದ ಭಕ್ತರು ಪರದಾಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ದಾರಿ ತೆರವು ಕಾರ್ಯಾಚರಣೆ ಕೆಲಸ ಮಾಡುತ್ತಿದೆ. ಹೆದ್ದಾರಿ ತಡೆಯಿಂದಾಗಿ ಹಲವು ಪ್ರಯಾಣಿಕರು ಪರದಾಡುವಂತಾಗಿದೆ.
ಎನ್ಎಚ್ಎಐ ವತಿಯಿಂದ ಹೆದ್ದಾರಿ ತೆರೆಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಶನಿವಾರ, ಉತ್ತರಾಖಂಡದ ಲಂಬಗಡ ಬಳಿಯ ಖಚ್ಡು ನಾಲೆಯಲ್ಲಿ ನೀರಿನ ಮಟ್ಟ ಏರಿಕೆಯಾದ ಕಾರಣ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಮತ್ತೆ ನಿರ್ಬಂಧಿಸಲಾಯಿತು.