ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಕ್ಷಿಗಳಿಗಾಗಲೀ ಮತ್ತು ಪ್ರಾಣಿಗಳಿಗಾಗಲೀ ಶುದ್ಧ ಕುಡಿಯುವ ನೀರನ್ನು ನೀಡೋದಕ್ಕೆ ಯೋಚಿಸಬೇಡಿ. ಬಾಯಾರಿಕೆ ಎಲ್ಲಾ ಪ್ರಾಣಿಗಳಿಗೂ ಒಂದೇ. ಆದರೆ ಅಪಾಯಕಾರಿ ಪ್ರಾಣಿಗಳ ಬಳಿ ತುಸು ಜಾಗ್ರತೆ ಇರಲಿ. ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸಿಂಹಕ್ಕೆ ಬಾಟಲಿಯಿಂದ ನೀರು ಕೊಟ್ಟು ಬಾಯಾರಿಕೆ ನೀಗಿಸಿದ. ಅವರ ಧೈರ್ಯ ಮತ್ತು ದಯೆಗೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ.
ಸಿಂಹ ಅಪಾಯಕಾರಿ ಪ್ರಾಣಿ. ಇದ್ದಕ್ಕಿದ್ದಂತೆ ಮನುಷ್ಯರ ಮೇಲೆ ದಾಳಿ ಮಾಡಿ ಪ್ರಾಣ ತೆಗೆಯುತ್ತವೆ. ಅವನ್ನು ಎದುರಿಸುವುದೇ ದೊಡ್ಡ ಸಾಹಸ. ಐಎಫ್‌ಎಸ್ ಅಧಿಕಾರಿ ಸುಶಾಂತ ನಂದ (@susantananda3) ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಒವ್ವ ವ್ಯಕ್ತಿ ನೀರಿನ ಬಾಟಲಿಯಿಂದ ಸಿಂಹಕ್ಕೆ ನೀರು ಕುಡಿಸುತ್ತಿರುವುದು ಕಂಡುಬಂತು. ನಂದಾ ಕ್ಯಾಪ್ಷನ್ ಕೂಡ ಕೊಟ್ಟಿದ್ದು, ‘ಈ ಗ್ರಹದಲ್ಲಿ ಮ್ಯಾಜಿಕ್ ಇದ್ದರೆ ಅದು ನೀರಿನಲ್ಲಿದೆ’ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಆತಂಕ ಹಾಗೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪ್ರಾಣಿಗಳು ಯಾವಾಗ ಮತ್ತು ಹೇಗೆ ವರ್ತಿಸುತ್ತವೆ ಎಂಬುದು ಗೊತ್ತಿಲ್ಲ ಸ್ವಲ್ಪ ಎಚ್ಚರಿಕೆ ಅಗತ್ಯ. ಆದರೂ ಸಿಂಹದ ದಾಹ ನೀಗಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಆ ವ್ಯಕ್ತಿಯನ್ನು ಜನ ಮೆಚ್ಚಿಕೊಂಡಿದ್ದಾರೆ.