ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊಸಳೆಯೊಂದಿಗೆ ಮನುಷ್ಯನ ಮದುವೆಯಾ ಇದೆಂಥಾ ವಿಚಿತ್ರ? ಹೌದು, ಆಶ್ಚರ್ಯ ಅನಿಸಿದರೂ ಇದು ಸತ್ಯ. ಮೊಸಳೆಯೊಂದಿಗೆ ಮದುವೆ ಸಾಮಾನ್ಯ ಮನುಷ್ಯನದ್ದಲ್ಲ ಮೇಯರ್ದ್ದು. ಪ್ರಾಚೀನ ಸಂಪ್ರದಾಯಗಳನ್ನು ಗೌರವಿಸಿ, ಮೆಕ್ಸಿಕನ್ ಮೇಯರ್ ಮೊಸಳೆಯನ್ನು ವಿವಾಹವಾದ ವಿಡಿಯೋ ವೈರಲ್ ಆಗುತ್ತಿದೆ.
ಮಳೆ ಬಾರದಿದ್ದರೆ ಕಪ್ಪೆಗಳ ಮದುವೆ, ಮರಗಳಿಗೆ ಮನುಷ್ಯರ ಮದುವೆ ಎಂಬ ಮಾತನ್ನು ಕೇಳಿದ್ದೇವೆ. ಆದರೆ ಮೊಸಳೆಯನ್ನು ಮದುವೆಯಾಗುವುದರ ಬಗ್ಗೆ ಏನು? ಸ್ಯಾನ್ ಪೆಡ್ರೊ ಹ್ಯೂಮೆಲುಲಾ ಮೇಯರ್ ಹ್ಯೂಗೋ ಸೋಸಾ ಅವರು ಅದ್ದೂರಿ ಸಮಾರಂಭದಲ್ಲಿ ಮೊಸಳೆಯನ್ನು ವಿವಾಹವಾದರು. ಈ ಕಾರ್ಯಕ್ರಮಕ್ಕಾಗಿ ಮೊಸಳೆಯು ಬಿಳಿ ಬಟ್ಟೆಯನ್ನು ಸುಂದರವಾಗಿ ಧರಿಸಿತ್ತು. ಮೇಯರ್ ಹ್ಯೂಗೋ ಸೋಸಾ ಅವರು ಮೊಸಳೆಗೆ ಮುತ್ತಿಟ್ಟು ಸಾಂಪ್ರದಾಯಿಕ ಸಂಗೀತ ವಾದ್ಯಗಳ ನಡುವೆ ವಿವಾಹವಾದರು. ಮಳೆಗಾಗಿ ಈ ಆಚರಣೆಯನ್ನು ಅನುಸರಿಸಲಾಗುತ್ತದೆಯಂತೆ. ಈ ಪದ್ಧತಿ ಶತಮಾನಗಳಿಂದಲೂ ಇದೆ. ಸಮಾರಂಭದ ನಂತರ, ಮೊಸಳೆಯನ್ನು ಕಹಳೆ ಊದುತ್ತಾ, ಡೋಲು ಬಾರಿಸುತ್ತಾ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.