ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನೇಕರು ರಾತ್ರೋರಾತ್ರಿ ಫೇಮಸಗ ಆಗೋದಕ್ಕಾಗಿ ಏನೇನೋ ಗಿಮಿಕ್ ಮಾಡ್ತಿದಾರೆ. ಅದಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡಲೂ ಹಿಂಜರಿಯುತ್ತಿಲ್ಲ. ಇಂಥದ್ದೇ ವಿಡಿಯೋವೊಂದು ಸಾಮಾಜಿಕ ಜಾಳತಾಣದಲ್ಲಿ ವೈರಲ್ ಆಗುತ್ತಿದೆ. ಯುವಕನೊಬ್ಬ ರೈಲ್ವೇ ಹಳಿಯ ಕೆಳಗೆ ಮಲಗಿದ್ದು, ರೈಲು ಹಳಿ ಮೇಲೆ ವೇಗವಾಗಿ ಬರುತ್ತಿರುವ ವಿಡಿಯೋವೊಂದು ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. ಯುವಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ.
ಅಭಿಷೇಕ್ ನರೇದಾ (@NaredaAbhishek) ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಶೇರ್ ಮಾಡಿರುವ ವಿಡಿಯೋವೊಂದು ನೆಟಿಜನ್ ಗಳನ್ನು ಕೆರಳಿಸಿದೆ. ಟ್ರ್ಯಾಕ್ ಮತ್ತು ಗ್ರೌಂಡ್ ನಡುವಿನ ಅಂತರದಲ್ಲಿ ನೀಲಿ ಶರ್ಟ್ನಲ್ಲಿ ಮಲಗಿರುವ ವ್ಯಕ್ತಿಯನ್ನು ವೀಡಿಯೊ ತೋರಿಸುತ್ತದೆ. ರೈಲಿನ ವೇಗದ ನಡುವೆಯೂ ಆ ವ್ಯಕ್ತಿ ಕೆಳಗೆ ಆರಾಮವಾಗಿ ಮಲಗಿದ್ದ. ಈ ವೀಡಿಯೋವನ್ನು ಆತನ ಸ್ನೇಹಿತರು ರೆಕಾರ್ಡ್ ಮಾಡಿರುವಂತಿದೆ. ‘ಇಂತಹ ಕೆಲಸಗಳನ್ನು ಮಾಡುವ ಮುನ್ನ ಭವಿಷ್ಯದ ಬಗ್ಗೆ ನೂರು ಬಾರಿ ಯೋಚಿಸಿ’ ಎಂಬ ಶೀರ್ಷಿಕೆಯೊಂದಿಗೆ ಅಭಿಷೇಕ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ರೈಲ್ವೆ ಪೊಲೀಸ್ ಪಡೆ (ಆರ್ಪಿಎಫ್), ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆಯನ್ನು ಟ್ಯಾಗ್ ಮಾಡಿದ್ದಾರೆ.
ಇಂತಹ ಕೃತ್ಯಗಳನ್ನು ಎಸಗುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.